ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೆಕ್ಯುಲರ್ ಶಬ್ದದಿಂದ ಸೋತ ಸಮಾಜ’

Last Updated 11 ಸೆಪ್ಟೆಂಬರ್ 2019, 18:34 IST
ಅಕ್ಷರ ಗಾತ್ರ

ಮಂಗಳೂರು: ‘ಬ್ರಿಟಿಷರ ಕಾಲದಲ್ಲಿ ಭಾರತಕ್ಕೆ ಬಂದ ಸೆಕ್ಯುಲರ್ ಶಬ್ದ ದಿಂದ ಹಿಂದೂ ಸಮಾಜವು ಸೋತು ಹೋಗಿದೆ’ ಎಂದು ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ನಗರದ ರಾಮಕೃಷ್ಣ ಆಶ್ರಮದಲ್ಲಿ ಬುಧವಾರ ‘ಸ್ವಚ್ಛ ಭಾರತ ಶ್ರೇಷ್ಠ ಭಾರತ’ ಸಮಾರಂಭದಲ್ಲಿ ಮಾತನಾಡಿದ ಅವರು, ಹಿಂದೂ ಎಂದಾಕ್ಷಣ ಅಸಹಿಷ್ಣುತೆ ಭಾವ ಮೂಡಿಸುವ ಯತ್ನ ನಡೆದಿದೆ. ‘ಸರ್ವೇಜನ ಸುಖಿನೋ ಭವಂತು...’ ಎಂಬ ಚಿಂತನೆ ಬೇರೆ ಯಾವುದಾದರೂ ದೇಶದಲ್ಲಿ ಇದೆಯೇ? ನಮಗೆ ಹೊರಗಿನ ಚಿಂತನೆಗಳು ಬೇಕೇ?’ ಎಂದು ಪ್ರಶ್ನಿಸಿದರು.

‘ಸೆಕ್ಯುಲರ್ ಶಬ್ದದ ಅವಶ್ಯಕತೆ ನಮ್ಮ ದೇಶಕ್ಕೆ ಇರಲಿಲ್ಲ. ಏಕೆಂದರೆ ಭಾರತವು ಎಲ್ಲ–ಎಲ್ಲರನ್ನೂ ಒಪ್ಪಿಕೊಂಡಿದೆ. ಓಡೋಡಿ ಬಂದ ಜನರಿಗೆ ಆಶ್ರಯ ನೀಡಿದೆ. ಭಾರತಕ್ಕೆ ಬಂದ ಪಾರ್ಸಿಗಳು ಹಾಲಿನಲ್ಲಿನ ಸಕ್ಕರೆಯಂತೆ ಇದ್ದಾರೆ. ಎಂದೂ ಅಲ್ಪಸಂಖ್ಯಾತ ಸ್ಥಾನಮಾನವನ್ನು ಕೇಳಿಲ್ಲ. ಅವರ ಜನಸಂಖ್ಯೆಯೂ ಹೆಚ್ಚಾಗಲಿಲ್ಲ’ ಎಂದು ಸೂಚ್ಯವಾಗಿ ಹೇಳಿದರು.

‘ವಿಶ್ವ ಯೋಗದಿನವನ್ನು ನಮ್ಮ ಬುದ್ಧಿಜೀವಿಗಳೇ ಪ್ರಶ್ನಿಸಿದರು. ‘ಓಂ ಸೂರ್ಯಾಯ ನಮಃ’ ಎಂದು ಹೇಳಿಸುತ್ತಾರೆ ಎಂದರು.
ಆದರೆ, ನೀವು ‘ಓಂ ಅಲ್ಲಾಯ ನಮಃ’ ಅಥವಾ ‘ಓಂ ಯೇಸುವೇ ನಮಃ’ ಎಂದರೂ ಅಡ್ಡಿಯಿಲ್ಲ’ ಎಂದು ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT