ಪಾಲಕ್ಕಾಡ್ ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅರುಣ್ ಕುಮಾರ್ ಚತುರ್ವೇದಿ ನಿರ್ದೇಶನದಲ್ಲಿ, ಅಪರಾಧ ಚಟುವಟಿಕೆ ನಡೆಯುವ ಸ್ಥಳಗಳು, ಸೇತುವೆಗಳ ಪ್ರದೇಶ ಕೇಂದ್ರೀಕರಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅತ್ಯಾಧುನಿಕ ತಂತ್ರಜ್ಞಾನದ ಈ ಕ್ಯಾಮೆರಾಗಳು ಕಡಿಮೆ ಬೆಳಕಿನಲ್ಲಿ ರಾತ್ರಿ ವೇಳೆ ಕೂಡ ಕಾರ್ಯ ನಿರ್ವಹಿಸುತ್ತವೆ. ಧ್ವನಿ ಮತ್ತು ವಿಡಿಯೊ ಚಿತ್ರೀಕರಣ ಮಾಡುವ ಸಾಮರ್ಥ್ಯ ಹೊಂದಿದ್ದು, ಮೈಕ್ರೊಫೋನ್ ಅನ್ನು ಹೊಂದಿವೆ. ಕ್ಯಾಮರಾಗಳ ಸಂಗ್ರಹ ಸಾಮರ್ಥ್ಯವೂ ಅಧಿಕವಾಗಿದೆ. 350 ಡಿಗ್ರಿ ಸಮತಲದಲ್ಲಿ ಮತ್ತು ಲಂಬದಲ್ಲಿ ಚಿತ್ರವನ್ನು ಸೆರೆಹಿಡಿಯುವಂತೆ ಇದನ್ನು ವಿನ್ಯಾಸ ಗೊಳಿಸಲಾಗಿದೆ. ಮೊಬೈಲ್ ಫೋನ್ ಅಪ್ಲಿಕೇಷನ್ ಮೂಲಕ ಯಾವುದೇ ಸ್ಥಳದಿಂದ ಇವುಗಳ ನಿರ್ವಹಣೆ ಮಾಡಬಹುದು ಎಂದು ವಿಭಾಗದ ಪ್ರಕಟಣೆ ತಿಳಿಸಿದೆ.