ಸೋಮವಾರ, ನವೆಂಬರ್ 18, 2019
29 °C
ಪ್ರೌಢಶಾಲಾ ಕ್ರೀಡಾಕೂಟ

ರಮ್ಯಶ್ರೀ ಜೈನ್ ಚಾಂಪಿಯನ್

Published:
Updated:
Prajavani

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯದ 10ನೇ ವಿದ್ಯಾರ್ಥಿನಿ ರಮ್ಯಶ್ರೀ ಜೈನ್  ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಜಾವಲಿನ್ ಸಹಿತ ಗುಂಡೆಸೆತ ಮತ್ತು ಡಿಸ್ಕಸ್ ಎಸೆತದಲ್ಲಿ ಪ್ರಥಮ ಸ್ಥಾನ ಗೆದ್ದು ಚಾಂಪಿಯನ್ ಆಗಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಮಂಗಳೂರಿನಲ್ಲಿ ಆಯೋಜಿಸಿದ್ದ ಎರಡು ದಿನಗಳ ಕ್ರೀಡಾಕೂಟ ಗುರುವಾರ ಸಮಾರೋಪಗೊಂಡಿತು.

ಉಡುಪಿಯಲ್ಲಿ ಅಮೆಚೂರು ಎಸೋಸಿಯೇಶನ್ ವತಿಯಿಂದ ನಡೆದ ದಕ್ಷಿಣ ವಲಯ ರಾಷ್ಟ್ರೀಯ ಮಟ್ಟದ ಜಾವೆಲಿನ್ ಮತ್ತು ಡಿಸ್ಕಸ್ ಎಸೆತ ವಿಭಾಗದಲ್ಲಿಯೂ ದಾಖಲೆ ಬರೆದಿದ್ದರು.

ಸಂಗಬೆಟ್ಟು ಗ್ರಾಮದ ಮಾಲ್ದಾಡು ನಿವಾಸಿ ರವೀಂದ್ರ ಜೈನ್ ಮತ್ತು ಪದ್ಮಶ್ರೀ ಜೈನ್ ಪುತ್ರಿ. ಈಕೆ ಹೈದರಾಬಾದಿನಲ್ಲಿ ಇದೇ 7ರಂದು ನಡೆಯಲಿರುವ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವರು ಎಂದು ಶಾಲೆಯ ಮುಖ್ಯಶಿಕ್ಷಕಿ ಸಬಿತ ಲವಿನಾ ಪಿಂಟೋ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)