ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು ಚಾಂಪಿಯನ್‌ಷಿಪ್‌ನಲ್ಲಿ ರಾಜ್ಯಕ್ಕೆ ಅಗ್ರಸ್ಥಾನ; 206 ಪದಕ ದಾಖಲೆ

Last Updated 28 ನವೆಂಬರ್ 2021, 15:36 IST
ಅಕ್ಷರ ಗಾತ್ರ

ಮಂಗಳೂರು: ಕರ್ನಾಟಕದ ಪಾರ್ಥ್‌ ವಾರಣಾಸಿ ರಾಷ್ಟ್ರೀಯ ಮಾಸ್ಟರ್ಸ್ ಈಜು ಚಾಂಪಿಯನ್‌ಷಿಪ್‌ನಲ್ಲಿ 4 ಚಿನ್ನದ ಪದಕ ಗಳಿಸಿದರು. ಚಾಂಪಿಯನ್‌ಷಿಪ್‌ನ ಮೂರು ದಿನಗಳಲ್ಲಿ ಕರ್ನಾಟಕವು 206 ಪದಕ ದಾಖಲಿಸುವ ಮೂಲಕ ಅಗ್ರಸ್ಥಾನದಲ್ಲಿ ಇದೆ. ನವದೆಹಲಿ 175, ಮಹಾರಾಷ್ಟ್ರ 92 ಪದಕಗಳನ್ನು ಗಳಿಸಿವೆ.

ಸಂತ ಅಲೋಶಿಯಸ್‌ ಈಜುಕೊಳದಲ್ಲಿ ಭಾನುವಾರ ನಡೆದ ಚಾಂಪಿಯನ್‌ ಷಿಪ್‌ನ ಪುರುಷರ ವಿಭಾಗದ 50 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ (31.22 ಸೆಕೆಂಡು), ಬಟರ್‌ ಫ್ಲೈ (27.34 ಸೆಕೆಂಡು), ಫ್ರೀಸ್ಟೈಲ್‌, ಹಾಗೂ 100 ಮೀಟರ್‌ ಫ್ರೀಸ್ಟೈಲ್‌ ‘ಸಿ’ ಗುಂಪು ವಿಭಾಗದಲ್ಲಿ ಅವರು 4 ಚಿನ್ನದ ಪದಕದ ಸಾಧನೆ ಮಾಡಿದ್ದಾರೆ. ಮಂಗಳೂರಿನ 77 ವರ್ಷದ ಶಿರಿನ್‌ ಸಾಲ್ಡಾನ 50 ಮೀಟರ್ಸ್‌ ‘ಎಲ್‌’ ಗುಂಪಿನ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಳ್ಳಿ, 200 ಮೀಟರ್‌ಫ್ರೀಸ್ಟೈಲ್‌ನಲ್ಲಿ ಚಿನ್ನದ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಫಲಿತಾಂಶ: ಪುರುಷರು: 50 ಮೀ. ಬಟರ್‌ ಫ್ಲೈ: ‘ಸಿ’ ಗುಂಪು: ಪಾರ್ಥ ವಾರಣಾಸಿ (ಕರ್ನಾಟಕ)–1, ಕಾಲ: 27:34, ಭರತ್ ಸಚ್ದೇವ (ದೆಹಲಿ)–2, ರೆಗ್ವಿಂದರ್ ಭಾಟಿಯಾ– 3, ಗುಂಪು ‘ಎ’: ತರುಣ್ ಟೋಕಾಸ್(ದೆಹಲಿ)–1, ಕಾಲ: 29.37, ದೀಲಿಪ್‌ ಕುಮಾರ್‌ ಆರ್‌ (ತಮಿಳುನಾಡು)–2,ಸವಾದ್ ಕೆ.(ಲಕ್ಷದ್ವೀಪ)–3, ಗುಂಪು ‘ಎನ್‌’: ಅರವಿಂದ ನೈನಾರ್‌ (ತಮಿಳುನಾಡ)–1, ಕಾಲ: 26;34, ದಿರನ್‌ ಎಂ., (ಕರ್ನಾಟಕ)–2, ಸಿ.ಜಿ. ಜಾನ್ಸನ್‌ (ಹರಿಯಾಣ)–3, ಬ್ಯಾಕ್‌ಸ್ಟ್ರೋಕ್‌ ‘ಜೆ’ ಗುಂಪು: ಬಾಸುದೇಬ್ ಸಹಾ (ಕರ್ನಾಟಕ)–1, ಕಾಲ: 50.42, ಜೈದೀಪ್‌ (ಗುಜರಾತ್‌)–2, ಥಾಮಸ್‌ ಕೆ.ಇ. (ಕೇರಳ)–3, ‘ಐ’ ಗುಂಪು: ಧಾಮಸ್‌ (ಕೇರಳ)–1, ಕಾಲ: 47.94, ರಮೇಶ್‌ ವಿಪತ್‌ (ಮಹಾರಾಷ್ಟ್ರ)–2, ತೊಕ್ಚೊಂ ಅರುಣ್‌ಕುಮಾರ್ ಸಿಂಗ್ (ಮಣಿಪುರ)–3, ಸಂಜೀವ್‌ಟೋಕಾಸ್ (ದೆಹಲಿ)–1, ಕಾಲ: 33.37, ಡಾ ಅಶುತೋಷ್ ಬೋಳೂರು (ಕರ್ನಾಟಕ)–2, ಶೈಫುದೀನ್ ಎಂ.ಟಿ .ಪಿ. (ಕೇರಳ)–3,

ಮಹಿಳೆಯರು: 50 ಮೀ. ಬಟರ್‌ ಫ್ಲೈ; ಗುಂಪು ‘ಜಿ’: ಸುನೀತಾ ರಾಣಾ ಅಗರ್‌ವಾಲ್‌ (ಕರ್ನಾಟಕ)–1, ಕಾಲ:42:64, ಇಳಾ ಶಂಕರ್‌ (ಕರ್ನಾಟಕ)–2, ರಾಜೇಶ್ವರಿ ಸುಧೀರ್‌ ಪವಾರ್‌ (ಮಹಾರಾಷ್ಟ್ರ)–3. ಗುಂಪು ‘ಸಿ’: ಎಂಬಾರ್ ಅರುಣಾ ವೇಣುಗೋಪಾಲ್ (ಕರ್ನಾಟಕ)–1, ಕಾಲ: 45.41, ಚಿತ್ರಾ ಅಶ್ವಿನ್‌ ಬಲ್ಲಾಳ (ಕರ್ನಾಟಕ)–2. ಸರೀಖಾ ಶೆಟ್ಟಿ –(ಕರ್ನಾಟಕ) 3, ಗುಂಪು ‘ಸಿ’ : ಸೀಮಾ ಶುಕ್ಲಾ (ದೆಹಲಿ)–1, ಕಾಲ: 42;47, ಸಿಂಧು ನರೋಪಂತ್ (ಕರ್ನಾಟಕ)– 2, ಶ್ರಿಲೇಖಾ (ತಮಿಳು ನಾಡು)–3, ಬ್ಯಾಕ್‌ಸ್ಟ್ರೋಕ್‌: ‘ಜೆ’ ಗುಂಪು: ಲಲಿತಾ ವಿಜಯ ರಾಘವನ್ (ಕರ್ನಾಟಕ)–1, ಕಾಲ: 1 ನಿಮಿಷ 33;58 ಸೆಕೆಂಡು, ಜಯಶ್ರೀ ತಿರ್ವೆಂಗಡಸ್ವಾಮಿ (ಕರ್ನಾಟಕ)–2, ಸವಿತಾ ಪುರಿ (ದೆಹಲಿ)–3, ಬ್ಯಾಕ್‌ಸ್ಟ್ರೋಕ್‌: ‘ಜಿ’ ಗುಂಪು: ಸುನೀತಾ ರಾಣಾ ಅಗರ್‌ವಾಲ್‌ (ಕರ್ನಾಟಕ)–1, ಕಾಲ: 43.83, ಎಡ್ನಾ ಶರ್ಮಾ(ದೆಹಲಿ)–2, ಇಳಾ ಶಂಕರ್‌(ಕರ್ನಾಟಕ)–3, ‘ಸಿ’ ಗುಂಪು: ವರುಣಾ ಮೈಯಾ(ಕರ್ನಾಟಕ)–1, ಕಾಲ: 42.80, ಡಾ ಸೌರಭಾ ಭಟ್(ಕರ್ನಾಟಕ)–2, ಪ್ರೀತಿ ಆಂಟೋನಿ(ಕೇರಳ)–3.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT