ಬಂಟ್ವಾಳ: 40 ವರ್ಷಗಳಿಂದ ಗ್ರಾಮೀಣ ಕ್ರೀಡಾಸಕ್ತರಿಗೆ ಪ್ರೋತ್ಸಾಹ ನೀಡುತ್ತಾ ನಿರಂತರವಾಗಿ ಕಬಡ್ಡಿ ಟೂರ್ನಿ ಆಯೋಜಿಸಿ ಕ್ರೀಡಾ ಸಾಧಕರನ್ನು ರೂಪಿಸುತ್ತಿರುವ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ನ ಶ್ರಮ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾ ಅಡಿಕೆ ಮತ್ತು ಕೃಷಿ ಉತ್ಪನ್ನ ವರ್ತಕರ ಸಂಘದ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಮೂಡಾಯೂರು ಹೇಳಿದರು.

ಇಲ್ಲಿನ ಪುಂಜಾಲಕಟ್ಟೆ ಸ್ವಸ್ತಿಕ್ ಫ್ರೆಂಡ್ಸ್ ಕ್ಲಬ್ ವತಿಯಿಂದ ಶನಿವಾರ ಆರಂಭಗೊಂಡ 41ನೇ ವರ್ಷದ ಅಂತರ ರಾಜ್ಯ ಮಟ್ಟದ ಪುರುಷರ 55 ಕೆ.ಜಿ ಮತ್ತು 65 ಕೆ.ಜಿ ವಿಭಾಗದ ಕಬಡ್ಡಿ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಕ್ಲಬ್ ಸ್ಥಾಪಕಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಜತೆ ಕಾರ್ಯದರ್ಶಿ ಫ್ರಾನ್ಸಿಸ್ ವಿ.ವಿ., ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಶಾರದಾ, ಮಾಜಿ ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ, ಕಜೆಕಾರು ಗ್ರಾ.ಪಂ.ಅಧ್ಯಕ್ಷ ದೇವದಾಸ್ ಅಬುರ, ವಾಮದಪದವು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ ಪಿಲಿಂಗಾಲು, ಪಟ್ಲ ಫೌಂಡೇಷನ್ ಅಧ್ಯಕ್ಷ ಯಶೋಧರ ಶೆಟ್ಟಿ ದಂಡೆ, ಉದ್ಯಮಿ ಅಬ್ದುಲ್ ಶುಕೂರ್ ಕುದ್ರೊಟ್ಟು, ಬೆಳ್ತಂಗಡಿ ಕ್ಷೇತ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ.ಪಾರೆಂಕಿ, ಪ್ರಾಂಶುಪಾಲ ಸಂತೋಷ್ ಕುಮಾರ್, ತೀರ್ಪುಗಾರ ಅಬೀಬ್ ಮಾಣಿ ಮಾತನಾಡಿದರು.

ಸ್ಯಾಕ್ಸೊಫೋನ್ ವಾದಕ ಕೆ.ಬಾಬು ಸಪಲ್ಯ ವಗ್ಗ ಅವರಿಗೆ ‘ಸ್ವಸ್ತಿಕ್ ಸಂಭ್ರಮ’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಎ.ಎಸ್.ಐ ಚಿದಾನಂದ ರೈ, ಪ್ರಮುಖರಾದ ಫೆಲಿಕ್ಸ್ ಗಾಡಿಯಾರ್, ರಾಜೇಶ್ ಪಿ.ಪುಂಜಾಲಕಟ್ಟೆ, ಜಯರಾಜ್ ಅತ್ತಾಜೆ, ಅಬ್ದುಲ್ ಹಮೀದ್ ಮಲ್ಪೆ, ಮಾಧವ ಬಂಗೇರ, ರಾಜೇಶ್ ಪುಳಿಮಜಲು ಭಾಗವಹಿಸಿದ್ದರು.

ಪ್ರಭಾಕರ ಪಿ.ಎಂ. ಸ್ವಾಗತಿಸಿ, ಅಬ್ದುಲ್ ಪಿ. ವಂದಿಸಿದರು. ಜಿಲ್ಲಾ ಮಟ್ಟದ ಪ್ರೌಢಶಾಲೆ ವಿಭಾಗ ಸಹಿತ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕು ಮಟ್ಟದ ಪ್ರಾಥಮಿಕ ಶಾಲಾ ಬಾಲಕ-ಬಾಲಕಿಯರ ಕಬಡ್ಡಿ ಪಂದ್ಯಾಟ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.