ಮಂಗಳೂರು: ರಾಜ್ಯ ಬಜೆಟ್ನಲ್ಲಿ ತುಳುಭಾಷೆಗೆ ರಾಜ್ಯದ 2ನೇ ಭಾಷೆಯ ಸ್ಥಾನಮಾನ ಘೋಷಣೆಯಾಗಬಹುದು ಎಂಬ ಕಾತರದಲ್ಲಿದ್ದ ತುಳುವರಿಗೆ ನಿರಾಸೆಯಾಗಿದೆ.

ಚುನಾವಣೆಯ ಹೊಸ್ತಿಲಲ್ಲಿ ಮುಖ್ಯ ಮಂತ್ರಿ ಮಂಡಿಸುವ ಬಜೆಟ್ನಲ್ಲಿ ಕರಾವಳಿಗೆ ಬಂಪರ್ ಕೊಡುಗೆ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಲ್ಲವ ನಿಗಮ ಸ್ಥಾಪಿಸಿ, ಹಣಕಾಸು ನೆರವು ನೀಡುವ ಈ ಹಿಂದೆ ನೀಡಿದ್ದ ಆಶ್ವಾಸನೆ ಕೂಡ ಈಡೇರಿಲ್ಲ.

ಜಿಲ್ಲೆಯ ಗ್ರಾಮೀಣ ಭಾಗದ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಲ್ಲಿಸಿದ್ದ ಆರು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಅನುದಾನ, ತುಳು ಜಾನಪದ ದಾಖಲೆಗಳ ಸಂರಕ್ಷಣೆ, ತುಳು ಸಾಹಿತ್ಯ ಅಕಾಡೆಮಿಗೆ ವಿಶೇಷ ಅನುದಾನ, ಮಂಗಳೂರಿಗರ ಬಹು ವರ್ಷಗಳ ಬೇಡಿಕೆಯಾಗಿರುವ ಐಟಿ ಪಾರ್ಕ್ ಸ್ಥಾಪನೆ ಬಗ್ಗೆ ಬಜೆಟ್ನಲ್ಲಿ ಪ್ರಸ್ತಾಪ ಆಗಿಲ್ಲ.

ಅಡಿಕೆಗೆ ತಗುಲಿರುವ ಹಳದಿ ಎಲೆ ಮತ್ತು ಎಲೆಚುಕ್ಕಿ ರೋಗ ಪರಿಹಾರಕ್ಕೆ ಸಂಶೋಧನೆ ನಡೆಸಲು ಕ್ಯಾಂಪ್ಕೊ ಸಲ್ಲಿಸಿದ್ದ ಮನವಿಗೆ ಸ್ಪಂದಿಸಿದ್ದ ಮುಖ್ಯಮಂತ್ರಿ, ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಸಮಾವೇಶದಲ್ಲಿ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನಕ್ಕೆ ಅನುದಾನ ನೀಡುವ ಭರವಸೆ ನೀಡಿದ್ದರು. ಆದರೆ, ಈ ಅನುದಾನವು ಕ್ಯಾಂಪ್ಕೊಗೆ ಬದಲಾಗಿ, ಗೃಹ ಸಚಿವರ ಜಿಲ್ಲೆಯ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಪಾಲಾಗಿದೆ.

ಕಂಬಳದ ಪರಿಚಯ: ಮಕ್ಕಳಿಗೆ ಗ್ರಾಮೀಣ ಕ್ರೀಡೆಗಳನ್ನು ಪರಿಚಯಿಸಲು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದವರೆಗೆ ಆಯೋಜಿಸುವ ಕ್ರೀಡಾಕೂಟದಲ್ಲಿ ಕೊಕ್ಕೊ, ಕುಸ್ತಿ, ಕಬಡ್ಡಿ, ಎತ್ತಿನಗಾಡಿ ಓಟದ ಜತೆಗೆ ತುಳುನಾಡಿನ ಅಸ್ಮಿತೆಯಾಗಿರುವ ಕಂಬಳವನ್ನು ಸೇರಿಸಿರುವುದು ಆಶಾದಾಯಕವಾಗಿದೆ.

ಮೀನುಗಾರರಿಗೆ ಸಂತಸ: ಮೀನು ಗಾರರು, ಅವರ ದೋಣಿಗಳ ಸುರಕ್ಷತೆಗಾಗಿ ₹ 17ಕೋಟಿ ಅನುದಾನ ದಲ್ಲಿ ಇಸ್ರೊ ಅಭಿವೃದ್ಧಿಪಡಿಸಿರುವ ಜಿಪಿಎಸ್ ಸಂಹವನ ವ್ಯವಸ್ಥೆಯನ್ನು ಎಲ್ಲ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳಲ್ಲಿ ಅಳವಡಿಸಲು ಕ್ರಮವಹಿಸುವುದಾಗಿ ಘೋಷಿಸಿರುವು ದು ಮೀನುಗಾರರಲ್ಲಿ ಉತ್ಸಾಹ ತಂದಿದೆ.

ಈ ಹಿಂದೆಯೇ ಒಮ್ಮೆ ಪ್ರಸ್ತಾಪ ವಾಗಿದ್ದ ಮಂಗಳೂರಿನ ಹಳೆ ಬಂದರಿಗೆ ಹೆಚ್ಚುವರಿ ಷಿಪ್ ಯಾರ್ಡ್ ಕಾರ್ಯಾ ಚರಣೆ ಪ್ರಾರಂಭಿಸಲು ಬಜೆಟ್ನಲ್ಲಿ ಅನುದಾನ ಮೀಸಲಿಡಲಾಗಿದೆ.
ಇದು ಮೀನುಗಾರಿಕೆ ಮತ್ತು ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗುವ ಆಶಾಭಾವನೆ ಮೂಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.