ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿಬದಿ ವ್ಯಾಪಾರಿಗಳ ತೆರವು: ಆಕ್ರೋಶ

ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಪ್ರತಿಭಟನೆ
Last Updated 4 ಜುಲೈ 2022, 4:32 IST
ಅಕ್ಷರ ಗಾತ್ರ

ಬೆಳ್ತಂಗಡಿ:ಪಾರ್ಪಿಕಲ್ಲು ಬಳಿ ಬೀದಿಬದಿ ವ್ಯಾಪಾರಿಗಳನ್ನುತೆರವು ಮಾಡಿ ಅವರ ಸೊತ್ತುಗಳ ನಾಶ ಮಾಡಿದ್ದನ್ನು ಖಂಡಿಸಿಬೀದಿಬದಿ ವ್ಯಾಪಾರಿಗಳ ಶ್ರೇಯಾಭಿವೃದ್ದಿ ಸಂಘ (ಸಿಐಟಿಯು) ಕೊಕ್ಕಡ ವಲಯ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಲೋಕೋಪಯೋಗಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.‌‌‌

ವಕೀಲ ಬಿ.ಎಂ.ಭಟ್ ಮಾತನಾಡಿ, ‘ಬೀದಿ ವ್ಯಾಪಾರಿಗಳ ಬದುಕುವ ಹಕ್ಕನ್ನು ಬೀದಿಗೆ ತಳ್ಳುವುದು ಅಧಿಕಾರಿಗಳ ಸೌಜನ್ಯದ ಕೆಲಸವಲ್ಲ.ಪಾರ್ಪಿಕಲ್ಲು ಬಳಿಯ ಬೀದಿ ಬದಿವ್ಯಾಪಾರಿಗಳು ಪರಿಶಿಷ್ಟರು ಮತ್ತು ಮುಸ್ಲಿಮರು ಎಂಬ ಕಾರಣಕ್ಕೆ ಎತ್ತಂಗಡಿ ಮಾಡಲಾಗಿದೆ. ಬದುಕುವ ಹಕ್ಕನ್ನು ಕಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ, ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

ಬೀದಿಬದಿ ವ್ಯಾಪಾರಿ ಸಂಘದ ಗೌರವಾಧ್ಯಕ್ಷ, ಸಿಐಟಿಯು ಮುಖಂಡ ಬಿ.ಕೆ. ಇಮ್ತಿಯಾಸ್ ಮಾತನಾಡಿ, ‘ಬೀದಿ ವ್ಯಾಪಾರಿಗಳಿಗೆ ಪರಿಹಾರ ನೀಡಿ, ಅಲ್ಲಿಯೇ ವ್ಯಾಪಾರ ನಡೆಸಲು ವ್ಯವಸ್ಥೆ ಮಾಡಬೇಕು ’ ಎಂದರು.

ಬೀದಿಬದಿ ವ್ಯಾಪಾರಿ ಸಂಘದ ಜಿಲ್ಲಾ ಕಾರ್ಯದರ್ಶಿ ಹರೀಶ್ ಪೂಜಾರಿ, ಎಸ್.ಕೆ. ಹಕೀಂ ಮಾತಾಡಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮಹಮ್ಮದ್ ಮುಸ್ತಾಫ, ಜಿಲ್ಲಾ ಖಜಾಂಚಿ ಆಸಿಫ್, ಕೊಕ್ಕಡ ವಲಯ ಅಧ್ಯಕ್ಷ ಶಿವಪ್ಪ ಪೂಜಾರಿ, ಕಾರ್ಯದರ್ಶಿ ಶಮೀರ್, ಖಜಾಂಜಿ ನವಾಜ್, ಉಮರ್, ಸಿನಾನ್, ಕಾರ್ಮಿಕ ಮುಖಂಡರಾದ ಎಲ್. ಮಂಜುನಾಥ್, ಜಯರಾಮ ಮಯ್ಯ, ಪಂಚಾಯಿತಿ ಮಾಜಿ ಸದಸ್ಯರಾದ ಶ್ಯಾಮರಾಜ್, ನೆಬಿಸಾ, ಧನಂಜಯ ಗೌಡ, ಮಹಮ್ಮದ್ ಅನಸ್, ಸಂಜೀವ ನಾಯ್ಕ, ಜಯಶ್ರೀ, ರಾಮಚಂದ್ರ, ಲಾರೆನ್ಸ್, ಭವ್ಯಾ, ಜಯಂತ ಪಂಜುರ್ಳಿಕೋಡಿ ಇದ್ದರು.

ಲೋಕೋಪಯೋಗಿ ಇಲಾಖಾ ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ್ ಶಿವಪ್ರಸಾದ್ ಹಾಗೂ ಎಂಜಿನಿಯರ್ ತೌಸಿಫ್ ಮನವಿ ಸ್ವೀಕರಿಸಿದರು. ಮೇಲಧಿಕಾರಿಗಳ ಜತೆ ಚರ್ಚಿಸಿ ನ್ಯಾಯ ಒದಗಿಸುವ ಭರವಸೆ ನೀಡಿದರು.ಶಮೀರ್ ಸ್ವಾಗತಿಸಿ, ಆಸಿಫ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT