ಕತ್ತರಿಯಿಂದ ಇರಿದು ಸಹಪಾಠಿಯ ಕೊಲೆ

7

ಕತ್ತರಿಯಿಂದ ಇರಿದು ಸಹಪಾಠಿಯ ಕೊಲೆ

Published:
Updated:

ಕಾಸರಗೋಡು: ಬಂದ್ಯೋಡು ಬಳಿಯ ಮುಟ್ಟಂನ ಮಖ್ದುಮಿಯಾ ಸಂಸ್ಥೆಯಲ್ಲಿ ಭಾನುವಾರ ವಿದ್ಯಾರ್ಥಿಯೊಬ್ಬ ಕತ್ತರಿಯಿಂದ ಇರಿದು ಸಹಪಾಠಿಯನ್ನು ಕೊಲೆ ಮಾಡಿದ್ದಾನೆ.

ಕುಂಬಳೆ ಬಂದ್ಯೋಡು ಬಳಿಯ ಅಡ್ಕತ್ ಕೋಟೆ ರಸ್ತೆಯ ಯೂಸುಫ್ ಮತ್ತು ಮತ್ತು ಹಲೀಮಾ ದಂಪತಿಯ ಪುತ್ರ ಮುಹಮ್ಮದ್ ಮಿದ್ಲಾಜ್ (16) ಮೃತ ವಿದ್ಯಾರ್ಥಿ. ಘಟನೆಗೆ ಸಂಬಂಧಿಸಿದಂತೆ ಕರ್ನಾಟಕ ನಿವಾಸಿಯಾದ ಸಹಪಾಠಿ ವಿದ್ಯಾರ್ಥಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಈ ಮತ ಅಧ್ಯಯನ ಕೇಂದ್ರದಲ್ಲಿ ಹಲವಾರು ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಿದ್ದು, ಮೃತ ಮಿದ್ಲಾಜ್, ಇಲ್ಲಿನ ಸಾಹಿತ್ಯ ಸಮಾಜದ ಕಾರ್ಯದರ್ಶಿಯಾಗಿದ್ದ. ಮದರಸದ ಸಾಹಿತ್ಯ ಸಮಾಜದ ತಯಾರಿಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳು ಬಣ್ಣದ ಕಾಗದ ತುಂಡರಿಸುತ್ತಿದ್ದರು. ಈ ಮಧ್ಯೆ ಮಿದ್ಲಾಜ್ ತನ್ನ ಜತೆಗಾರ ವಿದ್ಯಾರ್ಥಿಗೆ ಕತ್ತರಿ ಕೇಳಿದ್ದ. ಆದರೆ ಆತ ಕತ್ತರಿ ನೀಡದೇ ಇದ್ದಾಗ ಪರಸ್ಪರ ಮಾತಿಗೆ ಮಾತು ಬೆಳೆದಿತ್ತು ಎನ್ನಲಾಗಿದೆ.

ಸಿಟ್ಟುಗೊಂಡ ಸಹಪಾಠಿ, ಕತ್ತರಿ ತೆಗೆದು ಮಿದ್ಲಾಜ್‌ನ ಎದೆಗೆ ಚುಚ್ಚಿದ. ಆಳವಾದ ಗಾಯವಾದ ಮಿದ್ಲಾಜ್‌ನನ್ನು
ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಕುಂಬಳೆ ಇನ್‌ಸ್ಪೆಕ್ಟರ್ ಕೆ. ಪ್ರೇಮ್‌ ಸದನ್ ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !