ಶುಕ್ರವಾರ, ಮೇ 29, 2020
27 °C

ಸಬ್‌ಜೈಲ್ ಅಪಾಯಕಾರಿ ಗೋಡೆ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

17ಪಿಟಿಆರ್1 : ನೆಲಸಮಗೊಂಡ ಪುತ್ತೂರು ಹಳೆಯ ಸಬ್‌ಜೈಲ್ ಗೋಡೆ.

ಪುತ್ತೂರು:  ಹಳೆಯ ಸಬ್‌ಜೈಲ್‌ನ ಅಪಾಯಕಾರಿ ಶಿಥಿಲ ಬೃಹತ್ ಗೋಡೆಯನ್ನು ತಾಲ್ಲೂಕು ಆಡಳಿತ ನೆಲಸಮಗೊಳಿಸುವ ಮೂಲಕ ಸಂಭಾವ್ಯ ಅಪಾಯ ತಪ್ಪಿಸಿದೆ.

ಪತ್ರಿಕೆಗಳಲ್ಲಿ ಈ ಕುರಿತು ವರದಿ ಪ್ರಕಟವಾದ ಬೆನ್ನಲ್ಲೇ ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರು ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಹಳೆ ಜೈಲಿನ ಆವರಣ ಗೋಡೆ ಕೆಡಹುವುದೇ ಉತ್ತಮ ಎಂದು ನಿರ್ಧರಿಸಿದ್ದರು.ಶಾಸಕ ಸಂಜೀವ ಮಠಂದೂರು ಅವರು ಅಪಾಯದ ಸ್ಥಿತಿಯಲ್ಲಿರುವ  ಈ ಗೋಡೆಯನ್ನು ಕೆಡಹುವ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿದ್ದರು.

ಪುತ್ತೂರಿಗೆ ಭೇಟಿ ನೀಡಿ ಪ್ರಾಕೃತಿಕ ವಿಕೋಪದ ಕುರಿತು ತುರ್ತು ಸಭೆ ನಡೆಸಿದ್ದ ಸಚಿವ ಯು.ಟಿ.ಖಾದರ್ ಅವರು ಕೂಡ ಗೋಡೆ ಕೆಡವಿ ಅಪಾಯ ತಪ್ಪಿಸುವಂತೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ತಾಲ್ಲೂಕು ಆಡಳಿತ ಸಬ್‌ಜೈಲ್ ಗೋಡೆ ಕೆಡವಿ ಅಪಾಯ ತಪ್ಪಿಸುವ ಕೆಲಸ ಮಾಡಿದೆ.

ಬ್ರಿಟಿಷ್ ಆಡಳಿತ ಕಾಲದಲ್ಲಿ ಹಳೆಯ ತಾಲ್ಲೂಕು ಕಚೇರಿಗೆ ಹೊಂದಿಕೊಂಡು 5 ಅಡಿ ಎತ್ತರದ ಕಗ್ಗಲ್ಲಿನ ಅಡಿಪಾಯದೊಂದಿಗೆ ಜೋಡಿ ದಪ್ಪ ಕಲ್ಲು ಬಳಸಿಕೊಂಡು ನಿರ್ಮಿಸಲಾಗಿದ್ದ 20 ಅಡಿ ಎತ್ತರದ ಸಬ್‌ಜೈಲ್‌ನ ಉತ್ತರ ದಿಕ್ಕಿನ ಗೋಡೆಯ ಒಂದು ಬದಿ ಕಳೆದ ಮಳೆಗಾಲದಲ್ಲಿ ಕುಸಿದಿತ್ತು.

ಈ ಬಾರಿ ಪಶ್ಚಿಮ ದಿಕ್ಕಿನ ಗೋಡೆ ಬಿರುಕು ಬಿಟ್ಟು ವಾಲಿತ್ತು. ಯಾವುದೇ ಕ್ಷಣದಲ್ಲಿ ಕುಸಿದು ಬೀಳುವ ಸಾಧ್ಯತೆ ಇತ್ತು.   ಆಸ್ಪತ್ರೆಯ ಶವಾಗಾರ,  ವಿದ್ಯುತ್ ದೀಪ ಕಂಬಗಳು ಈ ಗೋಡೆಯ ಪಕ್ಕದಲ್ಲಿಯೇ ಇರುವುದರಿಂದ ಗೋಡೆ ಕುಸಿದುಬಿದ್ದರೆ ಅವಘಡ ಸಂಭವಿಸುವ ಸಾಧ್ಯತೆ ಇತ್ತು.

ಇದೀಗ ಬ್ರಿಟಿಷರ ಆಡಳಿತ ಕಾಲದ ಸಬ್‌ಜೈಲ್‌ ಗೋಡೆ ನೆಲಸಮಗೊಂಡಿದ್ದು, ಅವಶೇಷಗಳು ಮಾತ್ರ ಉಳಿದುಕೊಂಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು