ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಾಘಾತದಿಂದ ಕಾಡುಕೋಣ ಸಾವು, ಅರಣ್ಯ ಇಲಾಖೆಗೆ ಮರಣೋತ್ತರ ಪರೀಕ್ಷೆ ವರದಿ ಸಲ್ಲಿಕೆ

Last Updated 9 ಮೇ 2020, 8:04 IST
ಅಕ್ಷರ ಗಾತ್ರ

ಮಂಗಳೂರು: ನಗರಕ್ಕೆ ಬಂದು ಚಾರ್ಮಾಡಿ ಕಾಡಿಗೆ ಸಾಗಿಸುವಾಗ ಮೃತಪಟ್ಟ ಕಾಡುಕೋಣದ ಮರಣೋತ್ತರ ಪರೀಕ್ಷೆ ವರದಿ ಬಂದಿದ್ದು, ಕಾಡುಕೋಣ ಉದ್ವೇಗ, ಹೃದಯಾಘಾತದಿಂದ ಮೃತಪಟ್ಟಿದೆ ಎಂಬುದು ಸ್ಪಷ್ಟವಾಗಿದೆ.

ಶುಕ್ರವಾರ ಬೆಳ್ತಂಗಡಿ ವಲಯ ಅರಣ್ಯ ಅಧಿಕಾರಿಗೆ ಮರಣೋತ್ತರ ಈ ಪರೀಕ್ಷಾ ವರದಿಯನ್ನು ಚಾರ್ಮಾಡಿಯ ಸರ್ಕಾರಿ ವೈದ್ಯರು ನೀಡಿದ್ದು, ಶನಿವಾರ ಈ ವರದಿ ಮಂಗಳೂರು ಅರಣ್ಯ ಇಲಾಖೆ ಕಚೇರಿಗೆ ತಲುಪಲಿದೆ. ಸರ್ಕಾರಕ್ಕೆ ಈ ವರದಿಯನ್ನು ಸಲ್ಲಿಸಲಾಗುತ್ತದೆ ಎಂದು ಜಿಲ್ಲಾ ಉಪ ಅರಣ್ಯ ಸಂರಕ್ಷಾಣಾಧಿಕಾರಿ ಕರಿಕಾಳನ್‌ ತಿಳಿಸಿ‌ದ್ದಾರೆ.

ಶುಕ್ರವಾರವೂ ಕೂಡಾ ನಾಲ್ಕು ದಿನದಿಂದ ಮಂಗಳೂರು ನಗರದಲ್ಲಿ ಬೀಡು ಬಿಟ್ಟಿರುವ ಕಾಡು ಕೋಣವನ್ನು ಕಾಡಿಗಟ್ಟುವ ಕಾರ್ಯ ಮುಂದುವರೆದಿದ್ದು ಎರಡು ದಿನಗಳ ಹಿಂದೆ ಕಾಡು ಕೋಣ ತೋಕೂರು ಬಳಿ ಇರುವ ಕೆಐಒಸಿಎಲ್‌ ಪ್ರದೇಶದ ಕಾಡಿಗೆ ಹೋದ ಕಾರಣ ಅಲ್ಲಿನ ಪರಿಸರದ ರಸ್ತೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಹಾಗೆಯೇ ಕೋಣವಿದ್ದ ಪ್ರದೇಶಕ್ಕೆ ಹೋಗಲು ಸಾಧ್ಯವಾಗದ ಕಾರಣ ಡ್ರೋನ್‌ ಬಳಸಿ ಚಲನ ವಲನದ ಮೇಲೆ ನಿಗಾ ಇಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT