ಸುಬ್ರಹ್ಮಣ್ಯ: ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 2025-26ನೇ ಸಾಲಿನಲ್ಲಿ ₹ 1.80 ಕೋಟಿ ಲಾಭ ಗಳಿಸಿದ್ದು ಒಟ್ಟು ವ್ಯವಹಾರ ₹ 480.80 ಕೋಟಿ ಆಗಿದೆ ಎಂದು ಸಂಘದ ಅಧ್ಯಕ್ಷ ಸೋಮಶೇಖರ ಕಟ್ಟೆಮನೆ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಸಕ್ತ ವರ್ಷದಲ್ಲಿ ಸಂಘದ ಸಾಲ ವಸೂಲಾತಿ ಪ್ರಮಾಣ ಶೇ 99 ಆಗಿದ್ದು ₹ 27 ಕೋಟಿ ವ್ಯವಹಾರ ವಿಸ್ತರಣೆ ಆಗಿದೆ ಎಂದರು.

1925ರಲ್ಲಿ ಆರಂಭಗೊಂಡ ಸಂಸ್ಥೆ ಕಲ್ಮಕಾರು, ಕೊಲ್ಲಮೊಗ್ರು, ಹರಿಹರ ಪಲ್ಲತ್ತಡ್ಕ ಮತ್ತು ಬಾಳುಗೋಡು ಗ್ರಾಮಗಳ ವ್ಯಾಪ್ತಿಯಲ್ಲಿ 3306 ಎ ದರ್ಜೆಯ ಮತ್ತು 1129 ಸಿ ದರ್ಜೆಯ ಸದಸ್ಯರನ್ನು ಹೊಂದಿದ್ದು ಅವರ ಷೇರು ₹ 5.25 ಕೋಟಿಯಾಗಿದೆ. ಸಂಘದ ಸದಸ್ಯರ ಠೇವಣಿ ₹38.50 ಕೋಟಿಯಷ್ಟಿದ್ದು ಹೊರಬಾಕಿ ಸಾಲ ₹70.80 ಕೋಟಿ. ಸದಸ್ಯರಿಗೆ ಒದಗಿಸಿದ ಸಾಲ ₹35.88 ಕೋಟಿ ಎಂದು ಅವರು ಹೇಳಿದರು.

ಸಂಘವು 2 ಗೋದಾಮುಗಳನ್ನು ಹೊಂದಿದ್ದು ರಾಸಾಯನಿಕ ಗೊಬ್ಬರ, ಕ್ರೀಮಿ ಮತ್ತು ಕೀಟನಾಶಕ, ಸಿಮೆಂಟ್, ಕಬ್ಬಿಣ ಸ್ಟೀಲ್, ಶೀಟ್, ಪೈಪು, ಫಿಟ್ಟಿಂಗ್ಸ್, ಕೃಷಿ ಉಪಕರಣ ಮಾರಾಟದ ಮೂಲಕ ವರ್ಷದಲ್ಲಿ ಅಂದಾಜು ₹ 3 ಕೋಟಿಗೂ ಹೆಚ್ಚಿನ ವ್ಯವಹಾರ ನಡೆಸಿ ₹21.50 ಲಕ್ಷ ನಿವ್ವಳ ಲಾಭ ಗಳಿಸಿದೆ. ಕ್ಯಾಸ್ಕೋ ಒಡಂಬಡಿಕೆಯಲ್ಲಿ ₹ 9.6 ಕೋಟಿ ಮೊತ್ತದ ಅಡಿಕೆ, ರಬ್ಬರ್ ಹಾಗೂ ಕೊಕ್ಕೋ ಖರೀದಿಸಿದೆ. ಕಾಯ್ದಿರಿಸಿದ ನಿಧಿಯಾಗಿ ₹ 5.6 ಕೋಟಿ ಇದೆ ಎಂದರು.

ಸಂಘದ ಉಪಾಧ್ಯಕ್ಷ ಗಣೇಶ್ ಭಟ್ ಇಡ್ಯಡ್ಕ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬೆಳ್ಯಪ್ಪ ಗೌಡ ಮಣಿಯಾನಮನೆ, ನಿರ್ದೇಶಕರಾದ ಶೇಷಪ್ಪ ಗೌಡ ಕಿರಿಭಾಗ, ಹಿಮ್ಮತ್ ಕೆ.ಸಿ, ಕಮಲಾಕ್ಷ ಮುಳ್ಳುಬಾಗಿಲು, ರೆಘನ್ ಶೆಟ್ಯಡ್ಕ, ಗೋಪಾಲಕೃಷ್ಣ ಚಾಂತಾಳ, ಡ್ಯಾನಿ ಯಲದಾಳು, ವೇದಾವತಿ ಮುಳ್ಳುಬಾಗಿಲು, ಮಹಾಲಿಂಗ ನಾಯ್ಕ, ಮೇನಕ ಕೊಪ್ಪಡ್ಕ, ಬೊಳಿಯ ಅಜಿಲ ಬೆಂಡೋಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260522-29-1232622742

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.