ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಬ್ರಹ್ಮಣ್ಯ: ಗಣಪನಿಗೆ ಬೆಳ್ಳಿ ಕಿರೀಟ ಸಮರ್ಪಣೆ ಇಂದು

Published : 6 ಸೆಪ್ಟೆಂಬರ್ 2024, 14:35 IST
Last Updated : 6 ಸೆಪ್ಟೆಂಬರ್ 2024, 14:35 IST
ಫಾಲೋ ಮಾಡಿ
Comments

ಸುಬ್ರಹ್ಮಣ್ಯ: ಕ್ಷೇತ್ರದ ಉತ್ತಾರಾದಿ ಮಠದಲ್ಲಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ 54ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ 7 ದಿನ ನಡೆಯಲಿದೆ.

ಕಾರ್ಯಕ್ರಮದ ಅಂಗವಾಗಿ ಮಹಾಗಣಪತಿಗೆ 108 ತೆಂಗಿನಕಾಯಿ ಗಣಪತಿ ಹೋಮವು ಚೌತಿಯಂದು ನಡೆಯಲಿದೆ. ನೂಚಿಲದ ವಾಸುದೇವ ಭಟ್ ಅವರ ಮನೆಯಲ್ಲಿ ಕಲಾವಿದ ಕೃಷ್ಣಪ್ರಸಾದ್ ಅವರು ನಿರ್ಮಿಸಿದ ಮಹಾಗಣಪತಿಯ ವಿಗ್ರಹವನ್ನು ಮಂಗಳ ವಾದ್ಯಗಳ ನಿನಾದಗಳೊಂದಿಗೆ ಉತ್ತರಾದಿ ಮಠಕ್ಕೆ ಮೆರವಣಿಗೆಯಲ್ಲಿ ತರಲಾಗುತ್ತದೆ. ಬಳಿಕ ವಿಗ್ರಹ ಪ್ರತಿಷ್ಠಾಪಿಸಿ ಪೂಜೆ ನೆರವೇರಿಸಲಾಗುತ್ತದೆ. ಈ ಬಾರಿ ಮಹಾಗಣಪತಿಗೆ ತೊಡಿಸಲು ಸಮಿತಿಯ ವತಿಯಿಂದ ಕಡಬದ ಶ್ರೀದೇವಿ ಪ್ಯಾಲೇಸ್‌ನವರು ತಯಾರಿಸಿದ 2.475ಕೆ.ಜಿ ತೂಕದ ಸುಮಾರು ₹ 2.80ಲಕ್ಷ ಮೌಲ್ಯದ ಬೆಳ್ಳಿ ಕಿರೀಟ, ಪಾಶಂಕುಶ ಅರ್ಪಣೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT