ಸುಳ್ಯ: ಇಲ್ಲಿನ ಮೆಸ್ಕಾಂ ಕಚೇರಿಯಲ್ಲಿ ಗ್ರಾಹಕ ಮತ್ತು ಮೆಸ್ಕಾಂ ಕಚೇರಿ ಅಧಿಕಾರಿ ಮಧ್ಯೆ ಮಾತಿನ ಚಕಮಕಿ ನಡೆದು ಪರಸ್ಪರ ಹಲ್ಲೆ ಮಾಡಿಕೊಂಡಿರುವ ಬಗ್ಗೆ ಇಬ್ಬರ ವಿರುದ್ಧವೂ ಸುಳ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೆಸ್ಕಾಂ ಅಧಿಕಾರಿ ಹಲ್ಲೆ ಮಾಡಿದ್ದಾರೆ ಎಂದು ಗ್ರಾಹಕ ಅಂಬಟಡ್ಕ ನಿವಾಸಿ ಕುಲ್ದೀಪ್ ಅವರು ದೂರು ನೀಡಿದ್ದಾರೆ.

ಸೋಮವಾರ ಸಂಜೆ ವಿದ್ಯುತ್ ಇಲ್ಲದೆ ಇದ್ದುದರಿಂದ ಕುಲ್ದೀಪ್ ಮತ್ತು ಅವರ ನೆರೆಮನೆಯವರಾದ ಸಂದೀಪ್ ಅವರು ಸುಳ್ಯದ ಕೇರ್ಪಳದಲ್ಲಿರುವ ಮೆಸ್ಕಾಂ ಕಚೇರಿ ಬಳಿಗೆ ತೆರಳಿದ್ದರು. ಕಚೇರಿ ಹೊರ ಭಾಗದಲ್ಲಿ ನಿಂತಿದ್ದ ಮೆಸ್ಕಾಂ ಸಹಾಯಕ ಎಂಜಿನಿಯರ್ ಸುಪ್ರೀತ್ ಅವರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ತಿಳಿಸಿ, ವಿದ್ಯುತ್ ಪೂರೈಕೆ ಯಾವಾಗ ಆಗಬಹುದು ಎಂದು ಕೇಳಿದ್ದರು.

ಆಗ ಸುಪ್ರೀತ್ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿ ತಳ್ಳಿ ಗಾಯಗೊಳಿ ಸಿದ್ದರು. ಈ ಸಮಯದಲ್ಲಿ ತಡೆಯಲು ಬಂದ ಸಂದೀಪ್ ಅವರನ್ನು ನೆಲಕ್ಕೆ ದೂಡಿ ದ್ದಾರೆ. ಕೈಯಲ್ಲಿದ್ದ ಬೈಕ್ನ ಕೀಲಿಕೈಯನ್ನು ಎಸೆದಿದ್ದು ಬಳಿಕ ಬೈಕಿನ ಪೆಟ್ರೋಲ್ ಟ್ಯಾಂಕ್ನ ಕೆಳಭಾಗದ ಪೈಪನ್ನು ಚಾಕು ವಿನಿಂದ ತುಂಡರಿಸಿದ್ದಾರೆ. ಬಳಿಕ ನಾವು ಸುಳ್ಯ ಸರ್ಕಾರಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದು ಬಂದಿದ್ದೇವೆ ಎಂದು ಕುಲ್ದೀಪ್ ದೂರಿನಲ್ಲಿ ತಿಳಿಸಿದ್ದಾರೆ.

ಸುಳ್ಯ ಕಸಬಾ ಗ್ರಾಮದ ಕೇರ್ಪಳದಲ್ಲಿರುವ ಮೆಸ್ಕಾಂ ಕಚೇರಿಯಲ್ಲಿ ಕರ್ತವ್ಯದಲ್ಲಿರುವ ಸಮಯ ಕುಲದೀಪ್ ಎಂಬುವರು ಅವಾಚ್ಯವಾಗಿ ನಿಂದಿಸಿ ಹಲ್ಲೆ ಮಾಡಿದ್ದಾರೆ. ಈ ವೇಳೆ ನಾನು ಮೊಬೈಲ್ನಲ್ಲಿ ವಿಡಿಯೊ ಚಿತ್ರೀಕರಿಸಿದ್ದು, ಕುಲದೀಪ್ ಅವರು ಸ್ನೇಹಿತ ಸಂದೀಪ್ ಅವರಿಗೆ ಕರೆ ಮಾಡಿ ಕಚೇರಿಗೆ ಬರಲು ಹೇಳಿದ್ದಾರೆ. ಅಲ್ಲಿಗೆ ಬಂದ ಸಂದೀಪ್ ಕಲ್ಲಿನಿಂದ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಸುಳ್ಯ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ಸುಪ್ರೀತ್ ದೂರಿನಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260331-29-1392248419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.