ಸುಳ್ಯ: ತಾಲ್ಲೂಕಿನ ತೊಡಿಕಾನದ ಶೆಟ್ಟಿಯಡ್ಕದ ತೋಟದಲ್ಲಿ ಅಕ್ರಮ ವಾಗಿ ಮರಳು ದಾಸ್ತಾನು ಮಾಡಿದ್ದ ಸ್ಥಳಕ್ಕೆ ಸುಳ್ಯ ಪೊಲೀಸರು ದಾಳಿ ನಡೆಸಿ ಸುಮಾರು ₹ 1.20 ಲಕ್ಷ ಮೌಲ್ಯದ ಮರಳು ವಶಪಡಿಸಿದ್ದಾರೆ.

ಆರೋಪಿಗಳಾದ ಮನು ಹಾಗೂ ಚೆಂಬು ಗ್ರಾಮದ ಆಂಟನಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸುಳ್ಯ ಪಿಎಸ್ಐ ಸಂತೋಷ್ ಬಿ.ಪಿ. ನೇತೃತ್ವದ ತಂಡ ಕಾರ್ಯಾ ಚರಣೆ ನಡೆಸಿದ್ದು, ಪಯಸ್ವಿನಿ ನದಿಯಿಂದ ಕಾನೂನು ಬಾಹಿರವಾಗಿ ಮರಳನ್ನು ಸಂಗ್ರಹ ಮಾಡಿ ಮಾರಾಟ ಮಾಡುತ್ತಿದ್ದ ಮಾಹಿತಿ ಆಧರಿಸಿ ದಾಳಿ ಮಾಡಲಾಗಿತ್ತು.

ಸ್ಥಳದಲ್ಲಿ ಸುಮಾರು 50ರಿಂದ 60 ಮೆಟ್ರಿಕ್ ಟನ್ ತೂಕದ, ಸುಮಾರು 20 ಟಿಪ್ಪರ್ ಲೋಡ್ ಮರಳು ಸಂಗ್ರಹಿಸಲಾಗಿತ್ತು. ಆರೋಪಿಗಳು ಟಿಪ್ಪರ್ ಲಾರಿ ಹಾಗೂ ಹಿಟಾಚಿಯನ್ನು ಉಪಯೋಗಿಸಿಕೊಂಡು ಮರಳನ್ನು ನದಿಯಿಂದ ತೋಟಕ್ಕೆ ಟಿಪ್ಪರ್ ಲಾರಿಯಿಂದ ತಂದು ಸಂಗ್ರಹ ಮಾಡಿದ್ದರು. ಬಳಿಕ ಹಿಟಾಚಿಯಿಂದ ಟಿಪ್ಪರ್ ಲಾರಿಗಳಿಗೆ ಲೋಡ್ ಮಾಡಿ ಮರಳನ್ನು ಮಾರಾಟ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-29-1761036852

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.