ಮಂಗಳವಾರ, ಜುಲೈ 27, 2021
27 °C

ಸುಪ್ರೀತಾಗೆ ಮಿಸೆಸ್‌ ಕರ್ನಾಟಕ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸುಳ್ಯದ ಬ್ಯಾಂಕ್ ಉದ್ಯೋಗಿಯಾಗಿರುವ ಬೀರಮಂಗಲ ನಿವಾಸಿ ಸುಪ್ರೀತಾ ಕೆ.ಎಸ್ ಅವರು, ‘ಮಿಸೆಸ್ ಕರ್ನಾಟಕ -2020’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.

ಇದೇ 11 ರಂದು ಮೈಸೂರಿನಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಗೆದ್ದ ಸುಪ್ರೀತಾ ಅವರಿಗೆ, ಸ್ಪರ್ಧೆ ಆಯೋಜಿಸಿದ್ದ ಮೈಸೂರಿನ ಆರ್.ಆರ್.ಗ್ರೂಪ್ಸ್ (ರಾಕಿಂಗ್ ರತು ಗ್ರೂಪ್ಸ್)ನ ವ್ಯವಸ್ಥಾಪಕ ನಿರ್ದೇಶಕ ರಾಜೇಶ್ ಸಿದ್ಧಮಲ್ಲಪ್ಪವಂಶ ಕಿರೀಟ ತೊಡಿಸಿ, ಕಪ್‌ ನೀಡುವ ಮೂಲಕ ಗೌರವಿಸಿದರು.

ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿರುವ ಪುತ್ತೂರು ನಿವಾಸಿ ಕೆ.ಸುರೇಶ್-ಸವಿತಾ ಸುರೇಶ್ ದಂಪತಿಯ ಪುತ್ರಿಯಾಗಿರುವ ಸುಪ್ರೀತಾ, ಸುಳ್ಯ ಬೀರಮಂಗಲ ನಿವಾಸಿ, ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಅಜಿತ್ ಬಿ.ಟಿ. ಅವರ ಪತ್ನಿ. ಇವರಿಗೆ ಒಬ್ಬ ಪುತ್ರನಿದ್ದಾನೆ.

ಉಡುಪಿಯಲ್ಲಿ ಪ್ರೌಢ ಶಿಕ್ಷಣ ಹಾಗೂ ಪಿ.ಯು.ಸಿ. ಪೂರೈಸಿದ ಸುಪ್ರೀತಾ, ಪುತ್ತೂರಿನ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಪಡೆದಿದ್ದು, ಬಳಿಕ ಬ್ಯಾಂಕ್‌ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು