ಭಾನುವಾರ, ಫೆಬ್ರವರಿ 23, 2020
19 °C
ದೇಹದಾರ್ಢ್ಯದ ಮೂಲಕ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿರುವ ಮಂಗಳೂರು ಅಂಗಸೌಷ್ಠವ ಪ್ರತಿಭೆ

ದಕ್ಷಿಣ ಕನ್ನಡ: ಮಿ.ಯುನಿವರ್ಸ್ ಕನಸಿನ ಸೂರಜ್

ಅಭಿಷೇಕ್ ಪುದು Updated:

ಅಕ್ಷರ ಗಾತ್ರ : | |

Prajavani

1948 ರಲ್ಲಿ ಜಾನ್ ಗ್ರಿಮೆಕ್ ರಿಂದ 2019 ಜಾಕ್ ಬ್ರೂಕರ್ ತನಕ ವಿಶ್ವ ಹಲವು ‘ಮಿಸ್ಟರ್ ಯುನಿವರ್ಸ್‌’ಗಳನ್ನು ಕಂಡಿದೆ. ಅಂಗಸೌಷ್ಠವದಲ್ಲಿ ಆರೋಗ್ಯಕರ, ಸುಂದರಾಂಗರಾಗಿ ಹೊಮ್ಮ ಬೇಕು ಎಂಬ ಕನಸು ಹಲವರದ್ದು. ಆದರೆ, ಕನಸಿನೆಡೆಗೆ ಪರಿಶ್ರಮ ಹಾಕಿ ಸಾಗುವವರ ಮಾತ್ರ ವಿರಳ. ಆದರೆ, ಅಂತಹ ಸಾಧನೆ ಮಾಡುತ್ತಿರುವ ಮಂಗಳೂರಿನ ಪ್ರತಿಭೆ ಸೂರಜ್.

ಬದುಕಿನಲ್ಲಿ ಸಾಧನೆಗೆ ಅನೇಕ ಮಾರ್ಗಗಳಿವೆ. ಆದರೆ, ಇವೆಲ್ಲಕ್ಕೂ ಪರಿಶ್ರಮ ಬೇಕು. ಛಲದ ಜೊತೆಗೆ ಆತ್ಮವಿಶ್ವಾಸ ಮತ್ತು ದೃಢಸಂಕಲ್ಪ ಇದ್ದಾಗ ಮಾತ್ರ ದೇಹದಾರ್ಢ್ಯ ಕ್ಷೇತ್ರದಲ್ಲಿ ಹೆಸರು ಮಾಡಲು ಸಾಧ್ಯ. ಅದನ್ನು ತೋರಿಸಿಕೊಡುತ್ತಿದ್ದಾರೆ ಸೂರಜ್.

ದೇಹದಾರ್ಢ್ಯತೆಯೇ ನನ್ನ ಉಸಿರು ಎನ್ನುವ ಸೂರಜ್, ಸಾಮಾನ್ಯ ಕುಟುಂಬದಿಂದ ಬಂದ ಪ್ರತಿಭೆ. ಬಾಲ್ಯದಲ್ಲೇ ದೈಹಿಕ ಕಸರತ್ತಿನಲ್ಲಿ ಆಸಕ್ತಿ ಹೊಂದಿದ ಅವರಿಗೆ ಜಿಮ್ ಅಂದರೆ ಸರ್ವಸ್ವ. ಸಾಧಿಸಬೇಕೆಂಬ ಛಲದ ಜೊತೆ, ಸಾಧನೆ ಮಾಡಿದ್ದಾರೆ.

ಮಂಗಳೂರಿನ ವೆಂಕಪ್ಪ ಗುರಿಕಾರ್ ಮತ್ತು ಸುನಿತಾ ದಂಪತಿಯ ಮಗನಾದ ಸೂರಜ್, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನ ನಾಗುರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢ ಶಿಕ್ಷಣವನ್ನು ಕಪಿತಾನಿಯದಲ್ಲಿ ಪೂರೈಸಿದರು. ಆಗಲೇ ಅವರು ದೇಹದಾರ್ಢ್ಯದತ್ತ ಒಲವು ಹರಿಸಿದ್ದರು. 

ಆರಂಭದಲ್ಲಿ ವಿಶ್ವನಾಥ್ ಪ್ರಕಾಶ್ ಶಶಿಕಾಂತ್ ಉಳ್ಳಾಲ್ ಅವರಿಂದ ತರಬೇತಿ ಪಡೆದ ಸೂರಜ್, ಗರೋಡಿ ವಿಕ್ಸಲ್‌ನ ಸದಸ್ಯರೂ ಆಗಿದ್ದಾರೆ. ದೈಹಿಕ ವ್ಯಾಯಾಮದ ಜೊತೆ ಎಂಟು ವರ್ಷ ‘ಜಿಮ್ ಮಾಸ್ಟರ್’ ಆಗಿಯೂ ಸೇವೆ ಸಲ್ಲಿಸಿದ್ದಾರೆ. ದೇಹದಾರ್ಢ್ಯಕ್ಕಾಗಿ ತಾವು ದೈಹಿಕ ಕಸರತ್ತು ಮಾಡುವುದು ಮಾತ್ರವಲ್ಲ, ಇತರರಿಗೂ ಪ್ರೋತ್ಸಾಹ, ತರಬೇತಿ ನೀಡುತ್ತಿದ್ದಾರೆ. ಪ್ರಸುತ್ತ ಬಿ.ಸಿ.ರೋಡ್‌ನಲ್ಲಿ ಜಿಮ್ ತರಬೇತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.  ‘ಮಿಸ್ಟರ್ ಯುನಿವರ್ಸಲ್’ ಆಗಬೇಕು ಎಂಬ ತುಂಬಾ ಕನಸುನ್ನು ಕಟ್ಟಿಕೊಂಡಿದ್ದಾರೆ. 

ಚೆನ್ನೈಯಲ್ಲಿ 2018ರಲ್ಲಿ ನಡೆದ ರಾಷ್ಟ್ರಮಟ್ಟದ ‘ಮಿಸ್ಟರ್ ಇಂಡಿಯಾ’ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಕಂಚಿನ ಪದಕ ಹಾಗೂ ಮತ್ತೊಮ್ಮೆ ಚಿನ್ನದ ಪದಕ ಸಹಿತ ‘ಮಿಸ್ಟರ್‌ ಇಂಡಿಯಾ’ದ ಬಿರುದು ಪಡೆದಿದ್ದರು. ಅಲ್ಲದೇ, ‘ಮಿಸ್ಟರ್ ಇಂಡಿಯಾ ಜೆನೆಟಿಕ್ ಕ್ಲಾಸಿಕ್ ಫಿಟ್ನೆಸ್ ಚಾಂಪಿಯನ್’ ಪ‍್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು