ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುರತ್ಕಲ್: ಪಿಆರ್‌ಎಸ್‌ ಆರಂಭ

₹ 1.50 ಕೋಟಿ ವೆಚ್ಚದಲ್ಲಿ ರೈಲು ನಿಲ್ದಾಣದ ಅಭಿವೃದ್ಧಿ
Last Updated 26 ಜುಲೈ 2022, 5:51 IST
ಅಕ್ಷರ ಗಾತ್ರ

ಸುರತ್ಕಲ್: ಹಲವು ವರ್ಷಗಳ ಬೇಡಿಕೆಯಾಗಿದ್ದ ಪ್ಯಾಸೆಂಜರ್ಸ್ ರಿಸರ್ವೇಷನ್ ಸೆಂಟರ್ ಸುರತ್ಕಲ್ ರೈಲ್ವೆ ನಿಲ್ದಾಣದಲ್ಲಿ ಆರಂಭಗೊಂಡಿದ್ದು, ಶಾಸಕ ಡಾ.ಭರತ್ ಶೆಟ್ಟಿ ಟಿಕೆಟ್ ನೀಡುವ ಮೂಲಕ ಸೋಮವಾರ ಈ ಸೌಲಭ್ಯಕ್ಕೆ ಚಾಲನೆ ನೀಡಿದರು.

ಈ ಹಿಂದೆ ಕೊರೊನಾ ಸಂದರ್ಭದಲ್ಲಿ ಲಾಲ್‌ಬಾಗ್‌ನಲ್ಲಿದ್ದ ಪಿಆರ್‌ಎಸ್ ಅನ್ನು ಮುಚ್ಚಿದ್ದರಿಂದ, ಮಂಗಳೂರು, ಉಡುಪಿ ಕೇಂದ್ರ ನಿಲ್ದಾಣಕ್ಕೆ ಹೋಗುವ ಸ್ಥಿತಿಯಿತ್ತು. ಕೊಂಕಣ ರೈಲ್ವೆ ಹಿರಿಯ ಅಧಿಕಾರಿಗಳು ಒಂದು ತಿಂಗಳ ಅಂತರದಲ್ಲಿ ಕ್ಷಿಪ್ರವಾಗಿ ಕೇಂದ್ರವನ್ನು ಆರಂಭಿಸಿದ್ದಾರೆ ಎಂದು ಹೇಳಿದರು.

₹ 1.50 ಕೋಟಿ ವೆಚ್ಚದಲ್ಲಿ ರೈಲ್ವೆ ನಿಲ್ದಾಣದ ಮೂಲಸೌಕರ್ಯ ಮೇಲ್ದರ್ಜೆಗೆ ಏರಿಸಲಾಗುವುದು. ಈಗಾಗಲೇ ₹50ಲಕ್ಷ ಬಿಡುಗಡೆಯಾಗಿದೆ. ₹1 ಕೋಟಿ ವೆಚ್ಚದಲ್ಲಿ ರಸ್ತೆ, ಪಾರ್ಕಿಂಗ್, ಶೆಲ್ಟರ್, ಎಲ್‌ಇಡಿ ಲೈಟ್ ಅಳವಡಿಕೆ ಮತ್ತಿತರ ಕಾಮಗಾರಿ ನಡೆಯಲಿದೆ ಎಂದರು. ಕೊಂಕಣ ರೈಲ್ವೆ ನಿಗಮವಾಗಿರುವುದರಿಂದ ಸೀಮಿತ ಆದಾಯದಲ್ಲಿ ಅಭಿವೃದ್ಧಿ ಮಾಡುವುದು ಇಲಾಖೆಗೆ ಕಷ್ಟವಾದ ಕಾರಣ, ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದಲ್ಲಿರುವ ಏಕೈಕ ಸುರತ್ಕಲ್ ನಿಲ್ದಾಣವನ್ನು ಸ್ಮಾರ್ಟ್ ರೈಲ್ವೆ ನಿಲ್ದಾಣ ಮಾಡುವಲ್ಲಿ ಹಂತ ಹಂತವಾಗಿ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು. ರೈಲ್ವೆ ಇಲಾಖೆ ಸಿಎಂಡಿ ಸಂಜಯ್ ಗುಪ್ತ, ಕಾರವಾರ ರೀಜನ್ ರೈಲ್ವೆ ಮ್ಯಾನೇಜರ್ ಬಿ.ಬಿ.ನಿಕ್ಕಮ್, ಹಿರಿಯ ಆರ್‌ಟಿಎಂ ವಿನಯ್ ಕುಮಾರ್, ಪಬ್ಲಿಕ್ ರಿಲೇಷನ್ ಅಧಿಕಾರಿ ಸುಧಾ ಕೃಷ್ಣಮೂರ್ತಿ, ಎಟಿಎಂ ಜಿ.ಡಿ ಮೀನ, ಸುರತ್ಕಲ್ ನಾಗರಿಕ ಸಲಹಾ ಸಮಿತಿ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT