ಗುರುವಾರ , ಮಾರ್ಚ್ 23, 2023
23 °C

ಸುರತ್ಕಲ್: ಶಿವಾಜಿಯ ಪ್ರತಿಮೆ, ವೃತ್ತ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುರತ್ಕಲ್: ‘ಶಿವಾಜಿ ಮಹಾರಾಜರ ಪ್ರತಿಮೆ ಈ ಭಾಗದಲ್ಲಿ ಸ್ಥಾಪನೆಯಾಗಿರುವುದು ಹೆಮ್ಮೆಯ ವಿಚಾರ. ನಮ್ಮ ದೇಶದ ಮಣ್ಣಿನಲ್ಲಿ ಇಂದು ಪರಿವರ್ತನೆಯ ಯುಗ ಆರಂಭವಾಗಿದೆ’ ಎಂದು ಶಾಸಕ ಡಾ.ವೈ. ಭರತ್ ಶೆಟ್ಟಿ ಹೇಳಿದರು‌.

ಕೋಡಿಕೆರೆ ಶಿವಾಜಿ ಫ್ರೆಂಡ್ಸ್ ಸರ್ಕಲ್ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಿರ್ಮಿಸಿದ ಶಿವಾಜಿಯ ಪ್ರತಿಮೆ ಹಾಗೂ ಸರ್ಕಲ್ ಅನಾವರಣ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

‘ಪರಿವರ್ತನೆ ಯಾವುದೇ ಒಂದು ವರ್ಗದ ವಿರುದ್ಧವಲ್ಲ. ಶಿವಾಜಿಯ ಸ್ವರೂಪವನ್ನು ಯುವಕರು ತಮ್ಮ ಹೃದಯದಲ್ಲಿ ಇರಿಸಿಕೊಂಡರೆ ಹಿಂದೂ ಧರ್ಮವನ್ನು ರಕ್ಷಣೆ ಮಾಡಲು ಬೇರೆ ಯಾರೂ ಬೇಕಿಲ್ಲ. ವೀರರ ಸ್ಮಾರಕ ನಿರ್ಮಾಣ ಕಾರ್ಯವನ್ನು ಮುಂದುವರಿಸುತ್ತೇನೆ. ಅಭಿವೃದ್ಧಿ ಮತ್ತು ಹಿಂದುತ್ವ ಎರಡನ್ನೂ ಬಿಡುವ ಪ್ರಶ್ನೆಯೇ ಇಲ್ಲ’ ಎಂದರು.

ಮನಪಾ ಸದಸ್ಯ ವರುಣ್ ಚೌಟ ಮಾತನಾಡಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸುವುದು ನಮ್ಮೆಲ್ಲರ ಬಹುದಿನಗಳ ಕನಸಾಗಿತ್ತು. ಶಾಸಕರ ಮುತುವರ್ಜಿಯಿಂದ ಇಲ್ಲಿ ಶಿವಾಜಿ ಸರ್ಕಲ್ ನಿರ್ಮಾಣವಾಗಿದೆ. ಎಂದರು.

ಸಂಸ್ಥೆಯ ಗೌರವಾಧ್ಯಕ್ಷ ವಿಜಯ್ ಕುಮಾರ್ ಅಮೀನ್, ಸೀತಾರಾಮ್ ಪೂಜಾರಿ, ಸಂಸ್ಥೆಯ ಅಧ್ಯಕ್ಷ ಬಾಲಕೃಷ್ಣ ಕುಲಾಲ್, ಮುಡಾ ಎಇ ಆರತಿ, ಶನೀಶ್ವರ ಸೇವಾ ಸಮಿತಿ ಅಧ್ಯಕ್ಷ ಸುಬ್ರಮಣ್ಯ ರೆಡ್ಡಿ, ಪ್ರತಿಮೆ ನಿರ್ಮಿಸಿದ ಕಣಪ್ಪಾಡಿ, ಪ್ರಶಾಂತ್ ಮುಡಾಯಿಕೋಡಿ, ಪವಿತ್ರ ನಿರಂಜನ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು