ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಕನ್ನಡ ಜಿಲ್ಲಾ ಇಂಟರ್ ಕ್ಲಬ್ ಈಜು ಸ್ಪರ್ಧೆ: ಚೈತನ್ಯಾಗೆ ಪದಕ

Last Updated 30 ಆಗಸ್ಟ್ 2022, 16:01 IST
ಅಕ್ಷರ ಗಾತ್ರ

ಮಂಗಳೂರು: ಪುತ್ತೂರಿನಲ್ಲಿ ಈಚೆಗೆ ನಡೆದ ದಕ್ಷಿಣ ಕನ್ನಡ ಜಿಲ್ಲಾ ಇಂಟರ್ ಕ್ಲಬ್ ಈಜು ಸ್ಪರ್ಧೆಯಲ್ಲಿ ಮಂಗಳೂರು ಕಾರ್ಮೆಲ್ ಸ್ಕೂಲ್‌ನ ವಿದ್ಯಾರ್ಥಿನಿ ಚೈತನ್ಯಾ ಆರ್ ಹಲವು ಪದಕಗಳನ್ನು ಪಡೆದಿದ್ದಾಳೆ.

50 ಮೀಟರ್ ಅಂಡರ್‌ವಾಟರ್ ವಿಭಾಗದಲ್ಲಿ ಪ್ರಥಮ, 100 ಮೀಟರ್ ಬ್ಯಾಕ್ ಸ್ಟ್ರೋಕ್‌ನಲ್ಲಿ ಪ್ರಥಮ, 50 ಮೀಟರ್ ಬಟರ್‌ಫ್ಲೈನಲ್ಲಿ ದ್ವಿತೀಯ, 50 ಮೀಟರ್ ಬ್ಯಾಕ್ ಸ್ಟ್ರೋಕ್ ದ್ವಿತೀಯ ಸ್ಥಾನ ಗಳಿಸಿದ್ದಾಳೆ. ಸಂತ ಅಲೋಶಿಯಸ್ ವಿವ್ಹನ್ ಆಕ್ವಾ ಸೆಂಟರ್ ಈಜುಕೊಳದಲ್ಲಿ ಕೋಚ್ ಲೋಕರಾಜ್ ಮತ್ತು ಯಜ್ಞೇಶ್‌ ಅವರಿಂದ ತರಬೇತಿ ಪಡೆಯುತ್ತಿರುವ ಈಕೆ ಮಂಗಳೂರು ಪೊಲೀಸ್ ಕಮಿನರೇಟ್‌ನ ಪೊಲೀಸ್ ಇನ್‌ಸ್ಪೆಕ್ಟರ್ ರಂಗೇಗೌಡ ಮತ್ತು ನಯನಾ ಆರ್. ದಂಪತಿ ಪುತ್ರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT