ಸೋಮವಾರ, ಆಗಸ್ಟ್ 26, 2019
28 °C
ಬೆಳ್ತಂಗಡಿ: ಕೃತಕ ಸೇತುವೆಯಲ್ಲಿ ನಡೆದು ನೆರೆಪೀಡಿತರಿಗೆ ಸ್ಪಂದಿಸಿದ ಗಣಪತಿ ಶಾಸ್ತ್ರಿ

ಅಕ್ಕಿ ಮೂಟೆ ಹೊತ್ತೊಯ್ದು ನೀಡಿದ ತಹಶೀಲ್ದಾರ್‌

Published:
Updated:
Prajavani

ಬೆಳ್ತಂಗಡಿ: ನೆರೆಯಿಂದ ಹಾನಿಗೀಡಾದ ಚಾರ್ಮಾಡಿ ಅರಣ್ಯ ಪ್ರದೇಶದೊಳಗಿನಬಾಂಜಾರು ಮಲೆಗೆ ಸಂಪರ್ಕ ಕಲ್ಪಿಸಲಾದ ಕೃತಕ ಮರದ ಸೇತುವೆಯಲ್ಲಿ ಅಕ್ಕಿಮೂಟೆಯನ್ನು ಹೊತ್ತೊಯ್ದು ಸಂತ್ರಸ್ತರಿಗೆ ನೀಡಿದ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಕಾರ್ಯವು ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದೆ.

ನಿವೃತ್ತ ಯೋಧರೂ ಆಗಿರುವ ಅವರು, ನೆರೆ ಬಂದ ಬಳಿಕ ಹಲವಾರು ಬಾರಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ
ನೀಡಿದ್ದಾರೆ. ಜನತೆಯೇ ಹೋಗಲು ಕಷ್ಟಪಡುತ್ತಿದ್ದ ಪ್ರದೇಶ, ಸಂತ್ರಸ್ತರಿದ್ದ ಸ್ಥಳ ಹಾಗೂ ಪರಿಹಾರ ಕೇಂದ್ರಗಳಿಗೆ ತೆರಳಿ ಸಮಸ್ಯೆಗೆ ಸ್ಪಂದಿಸಿದ್ದಾರೆ. ಈ ಪೈಕಿ ದ್ವೀಪದಂತಾಗಿರುವ ಇಲ್ಲಿನ ಹೊಸಮಠ, ಅನಾರು, ಬಾಂಜಾರು ಮಲೆಗೆ ಸ್ವತಃತೆರಳಿ ಧೈರ್ಯ ತುಂಬಿದ್ದಾರೆ. ಜೀವನಾವಶ್ಯಕ ವಸ್ತುಗಳನ್ನು ಹೊತ್ತೊಯ್ದು ನೀಡಿದ್ದಾರೆ.

Post Comments (+)