ಸೋಮವಾರ, ಡಿಸೆಂಬರ್ 9, 2019
22 °C

ಕುಕ್ಕೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕೆ ಆದ್ಯತೆ: ಮುಂಡೋಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಸುಬ್ರಹ್ಮಣ್ಯ: ‘ಕುಕ್ಕೆ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಶ್ರೀ ದೇವಳದಲ್ಲಿ ಹೆಚ್ಚಿನ ಅನುಕೂಲತೆ ನೀಡಲು ಆಡಳಿತ ಮಂಡಳಿಯು ಆದ್ಯತೆ ನೀಡುತ್ತದೆ’ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಹೇಳಿದರು.

ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಿದ ಹೆಚ್ಚುವರಿ ಪ್ರಸಾದ ಕೌಂಟರ್ ಮತ್ತು ಶೃಂಗೇರಿ ಮಠಕ್ಕೆ ಅಳವಡಿಸಿದ ನೂತನ ನೆಲಹಾಸನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಹೆಚ್ಚುವರಿ ಪ್ರಸಾದ ಕೌಂಟರ್ ಅನ್ನು ದೇವಳದ ಧರ್ಮಸಮ್ಮೇಳನ ಮಂಟಪದ ಬಳಿ ನಿರ್ಮಿಸಲಾಗಿದೆ. ಅನ್ನದಾಸೋಹ ಮತ್ತು ಆಶ್ಲೇಷ ಬಲಿ ಸೇವೆ ನಡೆಯುವ ಶೃಂಗೇರಿ ಮಠದಲ್ಲಿ ನೆಲಹಾಸು ಅಳವಡಿಸಲಾಗಿದೆ. ಕ್ಷೇತ್ರದಲ್ಲಿ ಸ್ವಚ್ಚತೆಗೆ ಹೆಚ್ಚು ಪ್ರಾಧಾನ್ಯ ನೀಡಲಾಗುವುದು’ ಎಂದರು.

ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಪೇರಾಲ್, ಆಡಳಿತ ಮಂಡಳಿ ಸದಸ್ಯರಾದ ಮಹೇಶ್ ಕುಮಾರ್ ಕೆ.ಎಸ್ ಕರಿಕ್ಕಳ, ಕೃಷ್ಣಮೂರ್ತಿ ಭಟ್, ಮಾಧವ ಡಿ. ,ದಮಯಂತಿ ಕೂಜುಗೋಡು, ಮಾಸ್ಟರ್‌ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ ಶಿವರಾಮ ರೈ,  ಎಂಜಿನಿಯರ್‌ ಉದಯ ಕುಮಾರ್, ಶಿಷ್ಠಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್, ಗುತ್ತಿಗೆದಾರ ಪ್ರಕಾಶ್ ಕುಂದಾಪುರ  ಇದ್ದರು.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು