ಶನಿವಾರ, ಜನವರಿ 28, 2023
19 °C

ಸಿಎಸ್ಐ: ಬಿಷಪ್ ಆಗಿ ಹೇಮಚಂದ್ರ ಕುಮಾರ್ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಸಿಎಸ್‌ಐ ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ನೂತನ ಬಿಷಪ್ ಆಗಿ ಹೇಮಚಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.

ಸಿಎಸ್‌ಐ ಶಾಂತಿ ಮಹಾದೇವಾಲಯದಲ್ಲಿ ಬುಧವಾರ ನಡೆದ ಬಿಷಪ್ ದೀಕ್ಷೆ ಆರಾಧನೆಯಲ್ಲಿ ಚರ್ಚ್ ಆಫ್ ಸೌತ್ ಇಂಡಿಯಾದ ಮಹಾಧರ್ಮಾಧ್ಯಕ್ಷ ಎ.ಧರ್ಮರಾಜ ರಸಲಾಮ ಅವರು ಹೇಮಚಂದ್ರ ಅವರನ್ನು ನೇಮಕ ಮಾಡಿದರು.

ಬಿಷಪ್ ದೀಕ್ಷೆ ಆರಾಧನಾ ಕಾರ್ಯಕ್ರಮದಲ್ಲಿ ಸಿಎಸ್‌ಐನ ಡೆಪ್ಯುಟಿ ಮಾಡರೇಟರ್ ಡಾ. ರೂಬೆನ್ ಮಾರ್ಕ್, ಮಹಾ ಕಾರ್ಯದರ್ಶಿ ಸಿ. ಫರ್ನಾಂಡಿಸ್ ರತೀನರಾಜ, ಕೊಯಂಬತ್ಊರು ಡಯಾಸಿಸ್ ಬಿಷಪ್ ತಿಮೋಥಿ ರವಿಂದರ್, ಕೊಲ್ಲಂ ಕೊಟ್ಟಾರಕರ ಡಯಾಸಿಸ್‌ನ ಬಿಷಪ್ ಡಾ. ಒಮ್ಮನ್ ಜಾರ್ಜ್, ಕರ್ನಾಟಕ ಉತ್ತರ ಡಯಾಸಿಸ್‌ನ ಬಿಷಪ್ ಮಾರ್ಟಿನ್ ಸಿ. ಬೋರ್ಗೈ, ಮಾಡರೇಟರ್ಸ್ ಕಾರ್ಯದರ್ಶಿ ರೋಹನ್ ಪುಷ್ಪರಾಜನ್ ಇದ್ದರು.

ದಕ್ಷಿಣ ಸಭಾ ಪ್ರಾಂತವು ಮಂಗಳೂರು, ಚಾಮರಾಜನಗರ, ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಚಿಕ್ಕಮಗಳೂರು ವ್ಯಾಪ್ತಿಯನ್ನು ಒಳಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.