ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಪರೂಪದ ಟ್ರ್ಯಾವನ್‌ಕೋರ್ ಅಳಿಲು ಪತ್ತೆ

Last Updated 5 ಅಕ್ಟೋಬರ್ 2022, 20:52 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನಲ್ಲಿ ಅಪರೂಪದ ಟ್ರ್ಯಾವನ್‌ಕೋರ್ (Travanacore) ಹಾರುವ ಅಳಿಲು ಪತ್ತೆಯಾಗಿದೆ.

ಇವು ನಿಶಾಚರಿ ಆಗಿರುವುದರಿಂದ ಕಾಣಸಿಗುವುದು ಅಪರೂಪ. ಪರಿಸರ ಸಂರಕ್ಷಕ ದೀಪಕ್‌ ಸುಳ್ಯ ಅವರು ತಮ್ಮ ತೋಟದಲ್ಲಿ ಈ ಅಳಿಲು ಕಂಡು, ಚಿತ್ರ ಕ್ಲಿಕ್ಕಿಸಿದ್ದರು.

ನಿಸರ್ಗ ಕನ್ಸರ್ವೇಷನ್‌ ಟ್ರಸ್ಟ್‌ನ ನಾಗರಾಜ್ ಬೆಳ್ಳೂರು ಅವರು, ಇದು ಚಿಕ್ಕ ಹಾರುವ ಅಳಿಲು ಎಂಬುದನ್ನು ಖಚಿತಪಡಿಸಿದ್ದಾರೆ. ಸ್ಥಳೀಯವಾಗಿ ಇದನ್ನು ‘ದರಗು ಪಾಂಜ, ಚಿಕ್ಕ ಪಾಂಜ್‌’ ಎಂದು ಕರೆಯುತ್ತಾರೆ.

‘ಪಶ್ಚಿಮಘಟ್ಟದಲ್ಲಿರುವ ಟ್ರ್ಯಾವನ್‌ ಕೋರ್ ಹಾರುವ ಅಳಿಲು ಪ್ರಸ್ತುತ ದಕ್ಷಿಣ ಏಷ್ಯಾದ ಅತ್ಯಂತ ಚಿಕ್ಕ ಹಾರುವ ಅಳಿಲು ಜಾತಿಗಳಲ್ಲಿ ಒಂದಾಗಿದೆ. ಇದು ಕೇವಲ 32 ಸೆಂ.ಮೀ ಉದ್ದ ಇರುತ್ತದೆ. ದಕ್ಷಿಣ ಭಾರತದಲ್ಲಿ ಅಪರೂಪದ ಅಳಿಲು ಜಾತಿಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ದೈತ್ಯ ಹಾರುವ ಅಳಿಲು (ಇಂಡಿಯನ್ ಜೈಂಟ್) ಮತ್ತು ಟ್ರ್ಯಾವನ್‌ಕೋರ್ ಹಾರುವ ಅಳಿಲು ಎಂಬ ಎರಡು ಜಾತಿಗಳಿವೆ. ಒಂದು ಕಾಲದಲ್ಲಿ ನಾಶವಾಗಿವೆ ಎಂದು ನಂಬಲಾಗಿದ್ದ ಈ ಟ್ರ್ಯಾವನ್‌ಕೋರ್, ನೂರು ವರ್ಷಗಳ ನಂತರ ಕೇರಳದ ಪಶ್ಚಿಮಘಟ್ಟದಲ್ಲಿ ಪತ್ತೆಯಾಗಿತ್ತು’ ಎನ್ನು ತ್ತಾರೆ ಜೀವವೈವಿಧ್ಯ ಸಂಶೋಧಕ ಮಂಜುನಾಥ ನಾಯಕ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT