‘ಆ.30 ಸಂಜೆ 7.30 ಗಂಟೆಗೆ ಅಂಗಡಿ ಮುಚ್ಚಿದ್ದೆ. ಮರುದಿನ ಬೆಳಿಗ್ಗೆ 9ಕ್ಕೆ ಬಂದು ನೋಡಿದಾಗ ಅಂಗಡಿಯ ಬಾಗಿಲು ತೆರೆದಿತ್ತು. ಅಂಗಡಿಯಲ್ಲಿಟ್ಟಿದ್ದ, ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯಿಂದ ನಗದೀಕರಿಸಿದ್ದ ₹40 ಸಾವಿರ ನಗದು, 30 ಛತ್ರಿಗಳು ಹಾಗೂ 50 ಜೊತೆ ಚಪ್ಪಲಿಗಳು ಕಳುವಾಗಿದ್ದವು. ಕಳುವಾದ ಛತ್ರಿ ಮತ್ತು ಚಪ್ಪಲಿಗಳ ಅಂದಾಜು ಮೌಲ್ಯ ₹ 95ಸಾವಿರ’ ಎಂದು ಅಂಗಡಿ ಮಾಲೀಕ ರಾಮ ಎಸ್.ಅವರು ದೂರಿನಲ್ಲಿ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.