ಬುಧವಾರ, ಮಾರ್ಚ್ 29, 2023
24 °C

ಟಿಪ್ಪರ್ ಹಾಯಿಸಿ ಕೊಲೆ: ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೂಡುಬಿದಿರೆ: ಬುದ್ದಿಮಾತು ಹೇಳಿದ ವ್ಯಕ್ತಿಯ ಮೇಲೆ ಕೋಟೆ ಬಾಗಿಲು ಮಸೀದಿ ಬಳಿ ಟಿಪ್ಪರ್ ಹಾಯಿಸಿ ಕೊಲೆ ಮಾಡಿ ಪರಾರಿ ಯಾಗಿದ್ದ ಚಾಲಕ ಹ್ಯಾರಿಸ್‌ನನ್ನು ಮೂಡುಬಿದಿರೆ ಪೊಲೀಸರು ಮಂಗಳೂರು ಉಲಾಯಿ ಬೆಟ್ಟು ಎಂಬಲ್ಲಿ ಸೋಮವಾರ ಬಂಧಿಸಿ ದ್ದಾರೆ. ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಟ್ಗೇರಿ ನಿವಾಸಿ ಆರೋಪಿ ಈ ಹಿಂದೆ ಗಾಂಜಾ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ.

ಕೇರಳದ ವ್ಯಕ್ತಿಯ ಶವ ಪತ್ತೆ

ಸುಬ್ರಹ್ಮಣ್ಯ: ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವ ಸುಬ್ರಹ್ಮಣ್ಯ ಸಮೀಪದ ಕುಮಾರಧಾರ ನದಿ ಬಳಿ ಸೋಮವಾರ ಪತ್ತೆಯಾಗಿದೆ. ಶವ ಕೊಳೆತ ಸ್ಥಿತಿಯಲ್ಲಿದೆ. ಮೃತ ವ್ಯಕ್ತಿಯ ಶರ್ಟ್‌ನ ಟೈಲರ್ ಮಾರ್ಕ್‌ನಿಂದ, ಇವರು ಕೇರಳದ ಬಿಂಬಗಲ್ ಬೇಡಡಕ್ಕ ಗ್ರಾಮದ ಅಮ್ಮಂಗೋಡ್ ಅಚ್ಚುತ್ತನ್ ಎಂದು ಗುರುತಿಸಲಾಗಿದೆ. ಇವರು ಜನವರಿ 27ರಂದು ನಾಪತ್ತೆಯಾಗಿರುವ ಬಗ್ಗೆ ಕಾಸರಗೋಡಿನ ಬೇಡಗಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನಾ ಸ್ಥಳಕ್ಕೆ ಕೇರಳ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಸುಳ್ಯ ವೃತ್ತ ನಿರೀಕ್ಷಕ ರವೀಂದ್ರ ಸಿ.ಎಂ ಹಾಗೂ ಸುಬ್ರಹ್ಮಣ್ಯ ಎಸ್‌ಐ ಮಂಜುನಾಥ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.