ಬೆಂಗಳೂರು-ಮಂಗಳೂರು ರೈಲು ಪುನಾರರಂಭ

7

ಬೆಂಗಳೂರು-ಮಂಗಳೂರು ರೈಲು ಪುನಾರರಂಭ

Published:
Updated:

ಸುಬ್ರಹ್ಮಣ್ಯ: ಬೆಂಗಳೂರು-ಮಂಗಳೂರು ರೈಲು ಯಾನ ಶುಕ್ರವಾರದಿಂದ ಪುನಾರರಂಭಗೊಂಡಿದೆ.

ಎಡಕುಮೇರಿ ಬಳಿ ಬುಧವಾರ ರೈಲು ಹಳಿ ಮೇಲೆ ಗುಡ್ಡ ಕುಸಿದು ಬಿದ್ದಿತ್ತು. ಹಳಿ ಮೇಲೆ ಮಣ್ಣು ಬಿದ್ದ ಪರಿಣಾಮ ಈ ಮಾರ್ಗದಲ್ಲಿ ಸಂಚಾರ ಸ್ತಗಿತಗೊಂಡಿತ್ತು. ಹಳಿ ಮೇಲೆ ಬಿದ್ದ ಮಣ್ಣಿನ ತೆರವು ಕಾರ್ಯ ಶುಕ್ರವಾರ ಬೆಳಗ್ಗೆ ವೇಳೆಗೆ ಅಂತಿಮಗೊಂಡಿದೆ.

ಶುಕ್ರವಾರ ಈ ಮಾರ್ಗದಲ್ಲಿ ಹಗಲು ರೈಲು ಯಾವುದೇ ಅಡಚಣೆಯಿಲ್ಲದೆ ಸಂಚರಿಸಿದೆ. ಮಂಗಳೂರು-ಬೆಂಗಳೂರು ನಡುವಿನ ರಾತ್ರಿ ಸಂಚರಿಸುವ ರೈಲು ಕೂಡ ಸಂಚಾರ ಎಂದಿನಂತೆ ಸಂಚಾರ ಬೆಳೆಸಲಿದೆ. ಆದರೆ ತಡವಾಗಿ ಸಂಚರಿಸಲಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ.

ಸುಬ್ರಹ್ಮಣ್ಯ ಕ್ರಾಸ್ ರೋಡ್ -ಸಕಲೇಶಪುರ ರೈಲು ಮಾರ್ಗದ ನಡುವೆ ಮಳೆಯಿಂದ ಅಲ್ಲಲ್ಲಿ ಗುಡ್ಡಗಳು ಜರಿದು ರೈಲು ಮಾರ್ಗದ ಮೇಲೆ ಬಿದ್ದು ರೈಲು ಸಂಚಾರದಲ್ಲಿ ಆಗಾಗ್ಗೆ ವ್ಯತ್ಯಾಯ ಉಂಟಾಗುತ್ತಿದೆ.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !