ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲುಗಳ ಸಂಚಾರ ಪುನರಾರಂಭ

ಸುರಕ್ಷತಾ ಕ್ರಮಗಳೊಂದಿಗೆ ಪ್ರಯಾಣಕ್ಕೆ ಅವಕಾಶ
Last Updated 17 ಜೂನ್ 2021, 4:16 IST
ಅಕ್ಷರ ಗಾತ್ರ

ಮಂಗಳೂರು: ಕೋವಿಡ್–19 ಲಾಕ್‌ಡೌನ್‌ ಸಡಿಲಿಕೆ ಆಗುತ್ತಿದ್ದು, ದಕ್ಷಿಣ ರೈಲ್ವೆ ದೇಶದ ವಿವಿಧ ಭಾಗಗಳಿಗೆ ರೈಲು ಸಂಚಾರವನ್ನು ಪುನರಾರಂಭಿಸಲು ನಿರ್ಧರಿಸಿದೆ.

ಚೆನ್ನೈ ಸೆಂಟ್ರಲ್‌–ಮಂಗಳೂರು (ರೈ.ಸಂ. 02685) ದೈನಿಕ ಸೂಪರ್‌ಫಾಸ್ಟ್‌ ರೈಲು ಬುಧವಾರ (ಜೂನ್‌16)ದಿಂದ ಸಂಚಾರ ಆರಂಭಿಸಿದ್ದು, ಮಂಗಳೂರು–ಚೆನ್ನೈ ಸೆಂಟ್ರಲ್ (ರೈ.ಸಂ. 02686) ರೈಲು ಜೂನ್ 17 ರಂದು ಸಂಚಾರ ಆರಂಭಿಸಲಿವೆ.

ತಿರುವನಂತಪುರ ಸೆಂಟ್ರಲ್– ಮಂಗಳೂರು (ರೈ.ಸಂ. 06347) ದೈನಂದಿನ ವಿಶೇಷ ರೈಲು ಬುಧವಾರ (ಜೂನ್ 16) ದಿಂದ ಸಂಚಾರ ಆರಂಭಿಸಿದ್ದು, ಮಂಗಳೂರು–ತಿರುವನಂತಪುರ ಸೆಂಟ್ರಲ್ (06348) ರೈಲು ಜೂನ್ 17 ರಿಂದ ಸಂಚಾರ ಆರಂಭಿಸಲಿದೆ.

ಮಂಗಳೂರು ಸೆಂಟ್ರಲ್– ನಾಗರಕೊಯಿಲ್ (ರೈ.ಸಂ. 06605) ದೈನಿಕ ಎರ್ನಾಡ್‌ ವಿಶೇಷ ರೈಲು ಬುಧವಾರದಿಂದ ಸಂಚಾರ ಆರಂಭಿಸಿದೆ. ನಾಗರಕೊಯಿಲ್‌–ಮಂಗಳೂರು ಸೆಂಟ್ರಲ್‌ (ರೈ.ಸಂ. 06606) ರೈಲು ಜೂನ್ 17ರಿಂದ ಸಂಚರಿಸಲಿದೆ.

ಕೊಯಮತ್ತೂರು ಜಂಕ್ಷನ್–ಮಂಗಳೂರು ಸೆಂಟ್ರಲ್ (ರೈ.ಸಂ. 06323) ಹಾಗೂ ಮಂಗಳೂರು ಸೆಂಟ್ರಲ್‌–ಕೊಯಮತ್ತೂರು ಜಂಕ್ಷನ್‌ (ರೈ.ಸಂ. 06324) ರೈಲುಗಳು ಬುಧವಾರದಿಂದ ಸಂಚಾರ ಶುರು ಮಾಡಿವೆ.

ಮಂಗಳೂರು ಸೆಂಟ್ರಲ್–ಚೆನ್ನೈ ಸೆಂಟ್ರಲ್ (ರೈ.ಸಂ. 06628) ವೆಸ್ಟ್‌ ಕೋಸ್ಟ್‌ ದೈನಿಕ ಸೂಪರ್‌ಫಾಸ್ಟ್ ರೈಲು ಬುಧವಾರದಿಂದ ಓಡಾಟ ಆರಂಭಿಸಿದೆ. ಚೆನ್ನೈ ಸೆಂಟ್ರಲ್‌–ಮಂಗಳೂರು
(ರೈ.ಸಂ. 06627) ವೆಸ್ಟ್ ಕೋಸ್ಟ್‌ ರೈಲು ಜೂನ್‌ 17 ರಿಂದ ಸಂಚಾರ ಆರಂಭಿಸಲಿದೆ.

ಮಂಗಳೂರು–ಲೋಕಮಾನ್ಯ ತಿಲಕ (ರೈ.ಸಂ. 02620) ಮತ್ಸ್ಯಗಂಧ ಎಕ್ಸ್‌ಪ್ರೆಸ್‌ ದೈನಿಕ ರೈಲು ಜೂನ್‌ 15 ರಿಂದ ಹಾಗೂ ಲೋಕಮಾನ್ಯ ತಿಲಕ–ಮಂಗಳೂರು ಸೆಂಟ್ರಲ್‌ (ರೈ.ಸಂ. 02619) ರೈಲು ಜೂನ್‌ 16 ರಿಂದ ಸಂಚಾರ ಆರಂಭಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT