ಬುಧವಾರ, ಜೂನ್ 16, 2021
22 °C

ಮಳೆ: ರೈಲುಗಳ ಸಂಚಾರ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಮಳೆಯಿಂದಾಗಿ ಕೆಲ ರೈಲುಗಳ ಸಂಚಾರ ರದ್ದುಪಡಿಸಲಾಗಿದ್ದು, ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ತಿರುವನಂತಪುರ ಸೆಂಟ್ರಲ್‌– ಲೋಕಮಾನ್ಯ ತಿಲಕ್‌ ಟರ್ಮಿನಸ್‌ ಮುಂಬೈ (ರೈ.ಸಂ. 06346) ರೈಲು ಸಂಚಾರವನ್ನು ಇದೇ 9, 20 ರಂದು ಸಂಪೂರ್ಣ ರದ್ದುಪಡಿಸಲಾಗಿದೆ. ಲೋಕಮಾನ್ಯ ತಿಲಕ್ ಟರ್ಮಿನಸ್ ಮುಂಬೈ– ತಿರುವನಂತಪುರ ಸೆಂಟ್ರಲ್‌ (ರೈ.ಸಂ. 06345) ರೈಲನ್ನು ಇದೇ 9 ಮತ್ತು 20 ರಂದು ರದ್ದುಪಡಿಸಲಾಗಿದೆ. ನವದೆಹಲಿ– ತಿರುವನಂತಪುರ ಸೆಂಟ್ರಲ್ (ರೈ.ಸಂ. 02432) ರಾಜಧಾನಿ ಎಕ್ಸ್‌ಪ್ರೆಸ್‌ ರೈಲನ್ನು ಇದೇ 9, 11, 12, 16, 18 ರಂದು ಸಂಪೂರ್ಣ ರದ್ದು ಮಾಡಲಾಗಿದೆ. ತಿರುವನಂತಪುರ ಸೆಂಟ್ರಲ್‌– ನವದೆಹಲಿ (ರೈ.ಸಂ. 02431) ರೈಲನ್ನು ಇದೇ 11, 13, 14, 18 ಹಾಗೂ 20 ರಂದು ರದ್ದುಪಡಿಸಲಾಗಿದೆ.

ಮಾರ್ಗ ಬದಲಾವಣೆ: ಎರ್ನಾಕುಲಂ ಜಂಕ್ಷನ್‌–ಹಜರತ್ ನಿಜಾಮುದ್ದೀನ್‌ (ರೈ.ಸಂ. 02617) ದೈನಂದಿನ ಸೂಪರ್‌ಫಾಸ್ಟ್‌ ಸ್ಪೇಷಲ್‌ ರೈಲು ಇದೇ 9 ರಿಂದ 20 ರವರೆಗೆ ಮಡಗಾಂವ, ಲೋಂಡಾ ಜಂಕ್ಷನ್, ಮಿರಜ್ ಜಂಕ್ಷನ್, ಪುಣೆ, ಪನ್ವೇಲ್‌, ಕಲ್ಯಾಣ ಜಂಕ್ಷನ್‌ ಮೂಲಕ ಸಂಚರಿಸಲಿದೆ. ಎರ್ನಾಕುಲಂ ಜಂಕ್ಷನ್‌– ಹಜರತ್‌ ನಿಜಾಮುದ್ದೀನ್ (ರೈ.ಸಂ. 02284) ದುರಂತೋ ಸಾಪ್ತಾಹಿಕ ರೈಲು ಇದೇ 11 ಮತ್ತು 18 ರಂದು ಜೋಲಾರ್‌ಪೇಟ್‌, ಗುಂತಕಲ್‌ ಜಂಕ್ಷನ್‌, ಪುಣೆ ಮಾರ್ಗವಾಗಿ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು