ಉಳ್ಳಾಲ: ‘ಗ್ರಾಮೀಣ ಪ್ರದೇಶದಲ್ಲಿ ನಡೆಯುವ ಉತ್ಸವಗಳು ಈ ನಾಡಿನ ಸಂಸ್ಕೃತಿ, ಸಂಪ್ರದಾಯ, ಪರಂಪರೆಯನ್ನು ಬಿಂಬಿಸುತ್ತವೆ. ತುಳುನಾಡಿನ ಕೃಷಿ, ಸಂಸ್ಕೃತಿ, ಇತಿಹಾಸವನ್ನು ಪರಿಚಯಿಸುವ ಕಾರ್ಯ ಈಡೇರುತ್ತದೆ’ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹೇಳಿದರು.

ಮುಡಿಪು ಉತ್ಸವ ಸಮಿತಿ, ಕೃಷಿಕ ಸಮಾಜ ಉಳ್ಳಾಲ, ಯು.ಟಿ. ಫರೀದ್ ಚಾರಿಟಬಲ್ ಫೌಂಡೇಷನ್ ಟ್ರಸ್ಟ್ ಆಶ್ರಯದಲ್ಲಿ ವಿವಿಧ ಸಂಘ ಸಂಸ್ಥೆಗಳು, ಸರ್ಕಾರಿ ಇಲಾಖೆಗಳ ಸಹಭಾಗಿತ್ವದಲ್ಲಿ ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳ ಹಾಗೂ ಮುಡಿಪು ಉತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಯಾವುದೇ ಫಲಾಪೇಕ್ಷೆ ಇಲ್ಲದೆ ಹಿರಿಯರಾದ ಡಾ. ಮದನ್ ಮೋಹನ್ ನಾಯ್ಕ್ ಅವರು ಮುಡಿಪುವಿನಲ್ಲಿ ಶ್ರೀಕೃಷ್ಣ ಧ್ಯಾನ ಕೇಂದ್ರ ನಿರ್ಮಿಸುವ ಮೂಲಕ ಈ ಪರಿಸರವನ್ನು ಪ್ರವಾಸೋದ್ಯಮ ಕ್ಷೇತ್ರ, ಸೌಹಾರ್ದದ ಕೇಂದ್ರವನ್ನಾಗಿ ರೂಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಮುಡಿಪು ಪ್ರವಾಸೋದ್ಯಮ ಕ್ಷೇತ್ರವಾಗಿ ರೂಪುಗೊಳ್ಳಲಿದೆ ಎಂದರು.

ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ‘ಮುಡಿಪು ಹಂತ ಹಂತವಾಗಿ ಅಭಿವೃದ್ಧಿಗೊಳ್ಳುತ್ತಿದೆ’ ಎಂದರು.

ಶ್ರೀಕೃಷ್ಣ ಧ್ಯಾನ ಮಂದಿರದ ಸ್ಥಾಪಕ ಡಾ.ಮದನ್ ಮೋಹನ್ ನಾಯಕ್ ಅಡೇಕಳ ಅವರಿಗೆ ‘ಸೇವಾ ಧುರಂಧರ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಹಿಳೆಯರಿಗೆ ಸೀರೆ ನಡಿಗೆ ಸ್ಪರ್ಧೆ, ಯುವಕ ಯುವತಿಯರಿಗೆ ಗುಡ್ಡಗಾಡು ಓಟ ಸ್ಪರ್ಧೆ ಸೇರಿದಂತೆ ಅನೇಕ ಆಕರ್ಷಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಕರ್ನಾಟಕ ಅದಾನಿ ಗ್ರೂಪ್ ಅಧ್ಯಕ್ಷ ಕಿಶೋರ್ ಕುಮಾರ್ ಆಳ್ವ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಪ್ರಶಾಂತ್ ಕಾಜವ, ಕೃಷಿ ಇಲಾಖೆಯ ವಿಜಯ ಕುಮಾರ್ ರೈ, ಗೌರವ ಸಲಹೆಗಾರ ರಮೇಶ್ ಶೇಣವ, ಲಯನ್ಸ್ ಗೌವರ್ನರ್ ಅರವಿಂದ್ ಶೆಣೈ, ಗಣೇಶ್ ನಾಯ್ಕ್, ಭರತ್ ನಾಯ್ಕ್ ನಚ್ಚಗುತ್ತು, ಅಬ್ದುಲ್ ಜಲೀಲ್ ಮೋಂಟುಗೋಳಿ, ಅಬ್ದುಲ್ ನಾಸೀರ್ ಎನ್.ಎಸ್, ಮುಖಂಡರಾದ ರಮೇಶ್ ಬೋಳಿಯರ್, ನವಾಝ್ ನರಿಂಗಾನ, ಚಂದ್ರಹಾಸ್ ಕರ್ಕೇರ, ಮುಡಿಪು ಕಾಲೇಜು ಪ್ರಾಂಶುಪಾಲ ಸತೀಶ್ ಗಟ್ಟಿ, ಪ್ರಾಧ್ಯಾಪಕ ಶೇಷಪ್ಪ ಅಮೀನ್, ಮುಖಂಡರಾದ ರಾಧಾಕೃಷ್ಣ ಉಮಿಯ, ಕೃಷಿ ಇಲಾಖೆಯ ವೀಣಾ, ಶಿಕ್ಷಣಾಧಿಕಾರಿ ಈಶ್ವರ್, ಅರುಣ್ ಡಿಸೋಜ, ಜನಶಿಕ್ಷಣ ಟ್ರಸ್ಟ್ನ ಶೀನ ಶೆಟ್ಟಿ, ಕೃಷ್ಣ ಮೂಲ್ಯ, ಟಿ.ಆರ್. ಖಾದರ್, ನಾಸೀರ್ ಕೆ.ಕೆ.ಎಸ್, ಸೂಫಿ ಕುಂಞಿ, ಹೈದರ್ ಕೈರಂಗಳ, ತ್ಯಾಗಂ ಹರೇಕಳ, ಅಬ್ದುಲ್ ರಝಾಕ್ ಕುಕ್ಕಾಜೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಗುರುದತ್ ಭಾಗವಹಿಸಿದ್ದರು. ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕಾರ್ಯಾಧ್ಯಕ್ಷ ದೇವದಾಸ್ ಭಂಡಾರಿ ಅವರು ಸ್ವಾಗತಿಸಿದರು. ಸೌಜನ್ಯ ಹೆಗ್ಡೆ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-29-1140549868

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.