ಮಂಗಳೂರು: ತುಳು ಪರಿಷತ್ ಹಾಗೂ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮೂರನೆಯ ವಿದ್ಯಾರ್ಥಿ ತುಳು ಸಮ್ಮೇಳನವನ್ನು ಇದೇ 20ರಂದು ‘ತುಳು ಭವನ’ದಲ್ಲಿ ಹಮ್ಮಿಕೊಂಡಿದೆ. ವಿದ್ಯಾರ್ಥಿ ಕೇಂದ್ರಿತವಾದ ಈ ಸಮ್ಮೇಳನದ ಅಧ್ಯಕ್ಷರಾಗಿ ಬ್ರಹ್ಮಾವರದ ಎಸ್.ಎಂ.ಎಸ್. ಕಾಲೇಜಿನ ವಿದ್ಯಾರ್ಥನಿ ಅಭಿಜ್ಞಾ ಆಯ್ಕೆಯಾಗಿದ್ದಾರೆ. ದೇರಳಕಟ್ಟೆಯ ನಿಟ್ಟೆ ವಿದ್ಯಾಸಂಸ್ಥೆಯ ಸ್ನಾತಕೋತ್ತರ ವಿದ್ಯಾರ್ಥಿ ಪ್ರೀತಮ್ ನಾಯಕ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ ಎಂದು ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ ತಿಳಿಸಿದರು.

ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 10ರಿಂದ ಆರಂಭವಾಗುವ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ರಾಜಕಾರಣಿ ಎಂ.ವೀರಪ್ಪ ಮೊಯಿಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಭಾಗವಹಿಸಲಿದ್ದಾರೆ. ಕಾಲೇಜು ಪರಿಸರ– ನೈತಿಕ ಮೌಲ್ಯ ಕುರಿತ ಸಂವಾದದಲ್ಲಿ ನಿಡಸೋಸಿ ಜಗದ್ಗುರು ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮಿ ಭಾಗವಹಿಸಲಿದ್ದಾರೆ. ತುಳುನಾಡಿನ ಸೌಹಾರ್ದ ಪರಂಪರೆ ಉಳಿಸುವಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತ ಗೋಷ್ಠಿಯಲ್ಲಿ ಆರು ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ತುಳು ಗಾಯನ ಮತ್ತು ಜಾನಪದ ನೃತ್ಯಗಳನ್ನು ಒಳಗೊಂಡ ತುಳು ಕಲಾ ಐಸಿರಿ ಹಾಗೂ ತುಳುನಾಡಿನ ವಸ್ತ್ರವಿನ್ಯಾಸದ ಪ್ರದರ್ಶನ ‘ತುಳುನಾಡ ತುತ್ತೈತ’ ಕಾರ್ಯಕ್ರಮಗಳು ಮಧ್ಯಾಹ್ನ ನಡೆಯಲಿವೆ’ ಎಂದರು.

‘ಮಧ್ಯಾಹ್ನ 3ರಿಂದ ಸಮಾರೋಪ ನಡೆಯಲಿದ್ದು, ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲು, ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್, ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ.ಗಫೂರ್, ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಪ್ರಮುಖರಾದ ಜೆ.ಆರ್ ಲೋಬೊ, ಪದ್ಮರಾಜ್ ಆರ್. ಪೂಜಾರಿ, ಕೆ.ಯಾದವ ಶೆಟ್ಟಿ, ಅಜಿತ್ ಕುಮಾರ್ ರೈ ಮಾಲಾಡಿ, ಡಾ.ಅಮರಶ್ರೀ ಕೆ.ಶೆಟ್ಟಿ, ಕೆ. ದೇವದಾಸ್, ಸುರೇಶ್ ನಾವೂರು, ಧರ್ಮರಾಜ್ ಅಮ್ಮುಂಜೆ ಕಿಶೋರ್ ಡಿ. ಶೆಟ್ಟಿ ಭಾಗವಹಿಸುವದರು. ಕಾಲೇಜು ವಿದ್ಯಾರ್ಥಿಗಳಿಗಾಗಿ ನಡೆಸಿದ ಕಲಾಸಿರಿ ಸ್ಪರ್ಧೆಯ ಬಹುಮಾನ ವಿತರಣೆಯೂ ಇದೇ ಸಂದರ್ಭದಲ್ಲಿ ನಡೆಯಲಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ತುಳು ಪರಿಷತ್ತಿನ ಗೌರವ ಅಧ್ಯಕ್ಷ ಪ್ರಭಾಕರ ನೀರುಮಾರ್ಗ, ಪ್ರಧಾನ ಕಾರ್ಯದರ್ಶಿ ಬೆನೆಟ್ ಅಮ್ಮಣ್ಣ, ಖಜಾಂಚಿ ಸುಮತಿ ಹೆಗ್ಡೆ, ಸಮ್ಮೇಳನದ ಸಂಚಾಲಕಿ ಅಮಿತಾ ಅಶ್ವಿನ್, ಕಲಾ ಸಿರಿ ಸಂಚಾಲಕ ದುರ್ಗಾ ಪ್ರಸಾದ್, ಸುಧಾ ನಾಗೇಶ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.