ಗುರುವಾರ , ಏಪ್ರಿಲ್ 22, 2021
28 °C
ಒಬ್ಬನ ಮೃತದೇಹ ಪತ್ತೆ: ಇನ್ನೊಬ್ಬರಿಗೆ ಶೋಧ

ಪುತ್ತೂರು: ಮಣ್ಣಿನಡಿ ಸಿಲುಕಿದ ಇಬ್ಬರು ಕಾರ್ಮಿಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಜೆಸಿಬಿಯಲ್ಲಿ ಮಣ್ಣು ಅಗೆಯುವ ವೇಳೆ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ಗುರುವಾರ ಬೆಳಿಗ್ಗೆ ಪಾಣಾಜೆ ಗ್ರಾಮದ‌ ಕೋಟೆ ರಸ್ತೆಯ ಕೆಮಾಜೆಯಲ್ಲಿ‌ ನಡೆದಿದೆ.

ಕೋಳಿ ತ್ಯಾಜ್ಯ ಹಾಕುತ್ತಿದ್ದ ಗುಂಡಿಯ ಪೈಪ್ ಸರಿಪಡಿಸಲು ಇಳಿದಿದ್ದಾಗ, ಪೈಪ್ ಮುರಿದು ಬಿದ್ದು ಇಬ್ಬರು ಕಾರ್ಮಿಕರು ಹೊಂಡಕ್ಕೆ ಬಿದ್ದಿದ್ದರು. ಇದೇ ವೇಳೆ ಪಕ್ಕದಲ್ಲಿಯೇ ಜೆಸಿಬಿ ಮಣ್ಣು ಅಗೆಯುತ್ತಿದ್ದುದರಿಂದ ಮಣ್ಣು ಕುಸಿದು ಹೊಂಡದೊಳಗಿದ್ದ ಕಾರ್ಮಿಕರ ಮೇಲೆ ಬಿದ್ದಿದೆ.

ಕೂಲಿ ಕಾರ್ಮಿಕರಾದ ಸ್ಥಳೀಯ ನಿವಾಸಿಗಳಾದ ರವಿ ಮತ್ತು ಬಾಬು ಮಣ್ಣಿನಡಿ ಸಿಲುಕಿ ಹಾಕಿಕೊಂಡವರು. ಇಬ್ಬರಿಗೆ ಸುಮಾರು 35-40 ವರ್ಷದವರು ಎಂದು ತಿಳಿದು ಬಂದಿದೆ‌. ಇದರಲ್ಲಿ ಒಬ್ಬರ ಮೃತ ದೇಹವನ್ನು ಮೇಲಕ್ಕೆ ಎತ್ತಲಾಗಿದ್ದು, ಇನ್ನೊಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು