ಉಚ್ಚಿಲ ಜುಮ್ಮಾ ಮಸೀದಿ ಉರೂಸ್18 ರಿಂದ
ಮಂಗಳೂರು: ಸೋಮೇಶ್ವರ – ಉಚ್ಚಿಲ ಜುಮ್ಮಾ ಮಸೀದಿಯಲ್ಲಿ ಹಝ್ರತ್ ಅಸ್ಸಯ್ಯದ್ ಅರಬಿ ವಲಿಯುಲ್ಲಾಹಿ ತಂಙಳ್ ಹೆಸರಿನಲ್ಲಿ ಮೂರು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಈ ಬಾರಿ ಇದೇ 18ರಿಂದ 28ರವರೆಗೆ ನಡೆಯಲಿದೆ ಎಂದು ಉರೂಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಸಲಾಂ ಉಚ್ಚಿಲ ನಯಪಟ್ಣ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಉರೂಸ್ ಪ್ರಯುಕ್ತ ಸಾದಾತ್, ಉಲೇಮಾ ಹಾಗೂ ಸೂಫಿವರ್ಯರಿಂದ ಧಾರ್ಮಿಕ ಉಪನ್ಯಾಸ ಮತ್ತು ಪಾರ್ಥನೆಗಳು ಜರುಗಲಿವೆ. ಇದೇ 18ರಂದು ರಾತ್ರಿ 7ರಿಂದ ಉಳ್ಳಾಲದ ಸಂಯುಕ್ತ ಖಾಝಿ ಅಸಯ್ಯದ್ ಫಝಲ್ ಕೋಯಮ್ಮ ತಂಙಳ್, ಕೂರತ್ ಅವರ ಪ್ರಾರ್ಥನೆಯೊಂದಿಗೆ ಉರೂಸ್ ಉದ್ಘಾಟನೆಗೊಳ್ಳಲಿದೆ. ಇಸ್ಮಾಯಿಲ್ ಕೊಪ್ಪಳ ಅಧ್ಯಕ್ಷತೆ ವಹಿಸಲಿದ್ದಾರೆ. ಬಹು ಖಾಝಿ ಝೈನುಲ್ ಉಲೇಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಎಂ.ಪಿ ಇಬ್ರಾಹಿಂ ಫೈಝಿ ಮುಸೈನ್ ಸರದಿ ಕೆ.ಸಿ ರೋಡ್ ಭಾಗವಹಿಸುವರು’ ಎಂದರು.
‘ಇದೇ 22ರಂದು ಸಂಜೆ 4ಕ್ಕೆ ಸರ್ವಧರ್ಮ ಸಮಾವೇಶ ನಡೆಯಲಿದೆ. ಸರ್ವಧರ್ಮದ ಧರ್ಮ ಗುರುಗಳು, ರಾಜಕೀಯ ನೇತಾರರು, ಸಾಮಾಜಿಕ ಮುಖಂಡರು ಭಾಗವಹಿಸುವರು. ಮೌಲಾನಾ ಎಂ.ಎಸ್.ಎಂ ಅಬ್ದುಲ್ ರಶೀದ್ ಝೈನಿ ದಿಕ್ಕೂಚಿ ಭಾಷಣ ಮಾಡುವರು. ಉಚ್ಚಿಲ ಕೋಟೆ ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮೊಕ್ತಸರ ಪದ್ಮನಾಭ ತಂತ್ರಿ, ಫಾ.ವಿಕ್ಟರ್ ಡಿಮೆಲ್ಲೊ ಭಾಗವಹಿಸುವರು’ ಎಂದರು.
‘ಇದೇ 25ರಂದು ಬೆಳಿಗ್ಗೆ 9ಕ್ಕೆ ‘ಉಲೇಮಾ-ಉಮರಾ ಮತ್ತು ಮುತಾಲ್ಲಿಂ ಕಾನೈರನ್’ ನಡೆಯಲಿದ್ದು ಅಸಯ್ಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್, ಅಸಯ್ಯದ್ ಅತಾವುಲ್ಲಾ ತಂಙಳ್ ಉದ್ಯಾವರ, ಅಸಯ್ಯದ್ ಅಮೀರ್ ತಂಙಳ್ ಕಿನ್ಯ ಭಾಗವಹಿಸಲಿದ್ದಾರೆ. ಮೌಲಾನಾ ಕೂಟುಂಬಾರ ಅಬ್ದುರಹ್ಮಾನ್ ದಾರಿಮಿ ಮತ್ತು ಹನೀಫ್ ಹುದವಿ ತರಬೇತಿ ನೀಡಲಿದ್ದಾರೆ’ ಎಂದರು.
‘ಇದೇ 28ರಂದು ಸಮಾರೋಪದಲ್ಲಿ ಮಂಗಳೂರಿನ ಖಾಜಿ ತ್ವಾಕ ಅಹ್ಮದ್ ಮುಸ್ಲಿಯಾರ್ ಪ್ರಾರ್ಥನೆ ನೆರವೇರಿಸಲಿದ್ದಾರೆ. ಉಲಮಾ ಅಸ್ಸಯ್ಯದ್ ಜಿಪ್ತಿ ಮುತ್ತುಕೋಯ ತಂಙಳ್ ನೇತೃತ್ವ ವಹಿಸಲಿದ್ದಾರೆ’ ಎಂದರು.
ಇಸ್ಮಾಯಿಲ್ ಕೊಪ್ಪಳ, ಅಬ್ಬಾಸ್ ಯು.ಎಂ., ಪಿ.ಎ.ಅಬ್ಬಾಸ್ ಪೆರಿಬೈಲ್, ಎಂ.ಪಿ.ಮಹಮ್ಮದ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.