ಕಾಸರಗೋಡು: ಮಂಜೇಶ್ವರ ಬಳಿಯ ಉದ್ಯಾವರ ಮಾಡ ಅರಸು ಮಂಜಿಷ್ಣಾರ್ ದೈವಸ್ಥಾನದ ಪಾತ್ರಿಗಳು ಈಚೆಗೆ ಉದ್ಯಾವರ ಜಮಾಅತ್ ಮಸೀದಿಗೆ ಭೇಟಿ ನೀಡಿದರು.

ವಾರ್ಷಿಕ ಜಾತ್ರೆಯ ಪೂರ್ವಭಾವಿ ಯಾಗಿ ಮುಸ್ಲಿಮರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಕಾಯಕ ಈ ಮೂಲಕ ನಡೆದಿದೆ.ಮೇಷ ಸಂಕ್ರಮಣ ಪೂರ್ಣಗೊಳ್ಳುವ ಮೊದಲ ಶುಕ್ರವಾರ ಪಾತ್ರಿಗಳು ಮಸೀದಿಗೆ ಭೇಟಿ ನೀಡುವ ಕ್ರಮಕ್ಕೆ ಅನೇಕ ಶತಮಾನಗಳ ಇತಿಹಾಸವಿದೆ. ಕ್ಷೇತ್ರದ ಭಂಡಾರ ಮನೆಯಿಂದ ಮೆರವಣಿಗೆ ಮೂಲಕ ಬರುವ ದೈವ ಪಾತ್ರಿಗಳಿಗೆ ಮಸೀದಿ ಸಮಿತಿಯ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಸಾರ್ವಜನಿಕರು ಸ್ವಾಗತ ನೀಡುತ್ತಾರೆ. ತದನಂತರ ಜಾತ್ರೆಯ ಅವಧಿಯಲ್ಲಿ ಮಸೀದಿಯ ಪದಾಧಿಕಾರಿಗಳಿಗೆ ವಿಶೇಷ ಗೌರವ ನೀಡುವ ಸಂಪ್ರದಾಯವಿದೆ.ಮೇ 9ರಿಂದ 12ವರೆಗೆ ಬಂಡಿ ಉತ್ಸವ ಸಹಿತ ಜಾತ್ರೆ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-29-445836225

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.