ಉಜಿರೆ: ‘ರತ್ನತ್ರಯ ಧರ್ಮ ಪಾಲಿಸಿದರೆ ಮೋಕ್ಷ ಪ್ರಾಪ್ತಿಯಾಗುತ್ತದೆ’ ಎಂದು ಮೂಡುಬಿದಿರೆ ಜೈನಮಠದ ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.

ಬಜಿರೆ ರತ್ನವರ್ಮ ಇಂದ್ರ ಅವರ ಸ್ಮರಣಾರ್ಥ ಭಗವಾನ್ ಪಾರ್ಶ್ವನಾಥಸ್ವಾಮಿ ಬಸದಿಯಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಅವರು ಮಂಗಲ ಪ್ರವಚನ ನೀಡಿದರು.

ನಿವೃತ್ತ ಮುಖ್ಯಶಿಕ್ಷಕರಾದ ಮುನಿ ರಾಜ ರೆಂಜಾಳ, ಜಯರಾಮ ಶೆಟ್ಟಿ, ಉಜಿರೆಯ ಬಿ. ಸೋಮಶೇಖರ ಶೆಟ್ಟಿ ನುಡಿನಮನ ಸಲ್ಲಿಸಿದರು. ಮುಖಂಡ ರಾದ ಕೆ. ಅಭಯಚಂದ್ರ ಜೈನ್, ಕೆ. ಗಂಗಾ ಧರ ಗೌಡ, ಮೆಸ್ಕಾಂ ಅಧ್ಯಕ್ಷ ಕೆ. ಹರೀಶ್ ಕುಮಾರ್ ಶ್ರದ್ಧಾಂಜಲಿ ಅರ್ಪಿಸಿದರು.

ಅಗ್ರೋದಕ ಮೆರವಣಿಗೆ ಬಳಿಕ ಬಸದಿಯಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿಗೆ 216 ಕಲಶ ಅಭಿಷೇಕ, ದೇವರ ಉತ್ಸವ, ಬಾಹುಬಲಿ ಸ್ವಾಮಿಗೆ ಪಾದಾ ಭಿಷೇಕ ನಡೆಸಲಾಯಿತು. ‘ಮುಕ್ತಿಪಥದ ಬೆಳಕು’ ಎಂಬ ಕೃತಿ ವಿತರಿಸಲಾಯಿತು.

ಎಸ್.ಡಿ. ಸಂಪತ್ ಸಾಮ್ಯಾಜ್ಯ ಶಿರ್ತಾಡಿ, ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ಡಾ. ಮಹಾವೀರ ಜೈನ್ ಮೂಡುಬಿದಿರೆ, ಕೃಷ್ಣರಾಜ ಹೆಗ್ಡೆ ಭಾಗವಹಿಸಿದ್ದರು. ಮಹಾವೀರ ಜೈನ್ ಇಚಿಲಂಪಾಡಿ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-29-1722563826

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.