ಉಳ್ಳಾಲ: ಬಕ್ರೀದ್ ಹಬ್ಬವು ತ್ಯಾಗ–ಬಲಿದಾನದ ಹಬ್ಬವಾಗಿದ್ದು, ಪ್ರತಿ ಹಬ್ಬವೂ ಪ್ರೀತಿ, ವಿಶ್ವಾಸ, ಸಹೋದರತೆಯನ್ನು ನೆನಪಿಸುತ್ತದೆ ಎಂದು ವಿಧಾನ ಸಭೆಯ ಅಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲ ದರ್ಗಾದಲ್ಲಿ ಝಿಯಾರತ್ ಮಾಡಿ ಬಳಿಕ ಮಾಧ್ಯಮ ಜೊತೆ ಅವರು ಮಾತನಾಡಿದರು.

ಬಕ್ರೀದ್ ಪ್ರೀತಿ, ಪರೋಪಕಾರಿ ಮನೋಭಾವದ ಹಬ್ಬವಾಗಿದ್ದು, ನಮ್ಮ ಊರಲ್ಲಿ ಶಾಂತಿ ದಯಪಾಲಿಸಬೇಕು. ಶಾಂತಿ- ಸೌಹಾರ್ದದ ಜತೆ ನೆಮ್ಮದಿಯ ಲ್ಲಿ ಬದುಕಬೇಕು. ಊರಲ್ಲಿ ನಿರ್ಭಯದಿಂದ ಜೀವಿಸಬೇಕು ಎಂಬುದೇ ನನ್ನ ಪ್ರಾರ್ಥನೆ ಎಂದರು.

ಉಪಾಧ್ಯಕ್ಷ ಅಶ್ರಫ್ ರೈಟ್ ವೇ ಮಾತನಾಡಿ, ತ್ಯಾಗ ಬಲಿದಾನದ ಹಬ್ಬ ಆಗಿರುವ ಬಕ್ರೀದ್ ಸೌಹಾರ್ದ, ಸಹೋದತೆಯ ಬೀಡಾಗಬೇಕು. ಶಾಂತಿಯನ್ನು ಸಾರುವ ಇಸ್ಲಾಮ್ ಏಕತೆಯನ್ನು ಬಯಸುತ್ತದೆ. ಹಜ್ ಯಾತ್ರೆಗೆ ತೆರಳಿರುವ ಯಾತ್ರಾರ್ಥಿಗಳು ಸಂತೋಷದಿಂದ ಹಜ್ ಕರ್ಮ ನಿರ್ವಹಿಸಿ ಬರಲಿ ಎಂದು ಹೇಳಿದರು.

ಹಾಫಿಳ್ ಅಬ್ದುಲ್ ಮಜೀದ್ ಫಾಳ್ ಲಿ ಪೆರ್ನಾಲ್ ನಮಾಝ್ ಹಾಗೂ ಜುಮಾ ಕುತುಬಾ ನೆರವೇರಿಸಿದರು.

ಕೋಶಾಧಿಕಾರಿ ನಾಝಿಮ್ ರಹ್ಮಾನ್, ಅರೆಬಿಕ್ ಟ್ರಸ್ಟ್ ಉಪಾಧ್ಯಕ್ಷ ಅಶ್ರಫ್ ಕೋಡಿ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ ಮದನಿ ನಗರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-29-1318020832

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.