ಉಳ್ಳಾಲ: ಕೇಟರಿಂಗ್ ಉದ್ಯಮಿ, ಯಕ್ಷಗಾನ ಪ್ರಸಾದನಾ ವಸ್ತ್ರಾಲಂಕಾರ ಕಲಾವಿದ ಹೂಹಾಕುವಕಲ್ಲು ನಿವಾಸಿ ಬಾಲಕೃಷ್ಣ ಭಟ್ (56) ಮಿದುಳು ನಿಷ್ಕ್ರಿಯಗೊಂಡು ಮೃತಪಟ್ಟಿದ್ದು, ಅಂಗಾಂಗ ದಾನದ ಇಚ್ಛೆಯನ್ನು ಹೊಂದಿದ್ದ ಅವರ ಚರ್ಮ ಮತ್ತು ಮೂಳೆಯನ್ನು ದಾನ ಮಾಡಲಾಗಿದೆ.

2 ವರ್ಷದ ಹಿಂದೆ ಪಾರ್ಶ್ವವಾಯುವಿಗೆ ಈಡಾಗಿದ್ದ ಅವರು ಮೇ 7ರಂದು ನಿಧನರಾಗಿದ್ದರು. ಅಂಗಾಂಗ ದಾನ ಮಾಡುವ ಕುರಿತು ಬದುಕಿದ್ದಾಗ ಕುಟುಂಬಿಕರಲ್ಲಿ ತಿಳಿಸಿದ್ದು, ಅದರಂತೆ ಅವರ ಪತ್ನಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಯಲ್ಲಿ ಗ್ರಂಥಪಾಲಕಿಯಾಗಿರುವ ಮೂಕಾಂಬಿಕಾ ಹಾಗೂ ಡಾ.ಕಿರಣ್ ಭಟ್ ಅವರ ಸಹಕಾರದೊಂದಿಗೆ ನಗರದ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿ ಚರ್ಮ ಮತ್ತು ಮೂಳೆ ದಾನ ಮಾಡಲಾಯಿತು.

ಯಕ್ಷಗಾನದ ಆಸಕ್ತಿ ಹೊಂದಿದ್ದ ಅವರು ಹೂಹಾಕುವಕಲ್ಲಿನ ಭಾರತಿ ಕಲಾ ಆರ್ಟ್ಸ್ನ ರಾಘವದಾಸ್ ಅವರಲ್ಲಿ ವಸ್ತ್ರಾಲಂಕಾರ ಸಹಾಯಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.