ಉಳ್ಳಾಲ: ಕೆಲವೇ ದಿನಗಳಲ್ಲಿ ಇಸ್ರೇಲ್ಗೆ ತೆರಳಬೇಕಿದ್ದ ವ್ಯಕ್ತಿ ಮನೆಯೊಳಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಉಳ್ಳಾಲ ಹೊಯ್ಗೆ ಎಂಬಲ್ಲಿನ ದಿ.ಜೆರಿ ಡಿಸೋಜ ಮತ್ತು ಇಸಾಬೆಲ್ಲ ಎಂಬುವರ ಪುತ್ರ ಸೂರ್ಯಪ್ರಕಾಶ್ ಡಿಸೋಜ (42) ಮೃತಪಟ್ಟವರು.

ಒಂದು ವರ್ಷದಿಂದ ಇಸ್ರೇಲ್ ದೇಶದಲ್ಲಿ ಉದ್ಯೋಗದಲ್ಲಿದ್ದ ಅವರು, ಅಲ್ಲಿಯೇ ಉದ್ಯೋಗದಲ್ಲಿರುವ ಸಹೋದರಿ ಜೊತೆ ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದರು. ಸೂರ್ಯಪ್ರಕಾಶ್, ಮೇ 17ರಂದು ವಾಪಸಾಗುವವರಿದ್ದರು. ಎದೆ ಭಾಗದಲ್ಲಿ ನೋವು ನಿರಂತರವಾಗಿ ಇರುವುದರ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಈ ಕುರಿತು ಡೆತ್ ನೋಟ್ನಲ್ಲಿ ಬರೆದಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ.

ಅವರಿಗೆ ತಾಯಿ, ಮೂವರು ಸಹೋದರಿಯರು, ಸಹೋದರ ಇದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಂತಿಮ ಸಂಸ್ಕಾರವು ಮೇ 12ರಂದು ತೊಕ್ಕೊಟ್ಟು ಚರ್ಚ್ನಲ್ಲಿ ನಡೆಯಲಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-29-1282808966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.