ಉಳ್ಳಾಲ: ರಾಷ್ಟ್ರೀಯ ಸ್ವಚ್ಛತಾ ಅಭಿಯಾನ ಸ್ವಚ್ಛ ಪರಿಸರ -ಸ್ವಚ್ಛಮನೆ ಕಾರ್ಯಕ್ರಮದ ಅಂಗವಾಗಿ ಮುಡಿಪು ಅಪ್ನಾದೇಶ್ ಸ್ವಚ್ಛತಾ ಬಳಗ, ಜನಶಿಕ್ಷಣ ಟ್ರಸ್ಟ್ ವತಿಯಿಂದ ಕಣಂತೂರು ಪುಷ್ಪ -ಕೇಶವ ಅವರ ಮನೆಗೆ ಸ್ವಚ್ಛ ಮನೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಮುಡಿಪು ಜನಶಿಕ್ಷಣ ಟ್ರಸ್ಟ್ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.

ಅಪ್ನಾ ದೇಶ್ ಸ್ವಚ್ಛತಾ ಬಳಗದ ಮುಖಂಡ ರಮೇಶ್ ಶೇಣವ ಪ್ರಶಸ್ತಿ ಪ್ರದಾನ ಮಾಡಿದರು.

ಮನೆಯ ಸುತ್ತ ಹಸಿರು ಪರಿಸರ, ಪ್ರಾಣಿ ಪಕ್ಷಿಗಳ ಒಡನಾಟದ ಹವ್ಯಾಸ ನಮ್ಮ ದೈಹಿಕ–ಮಾನಸಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ಈ ನಿಟ್ಟಿನಲ್ಲಿ ಸ್ವಚ್ಛ ಮನೆ ಪ್ರಶಸ್ತಿ ಪ್ರೇರಣೆಯಾಗಲಿ ಎಂದರು.

ಸ್ವಚ್ಛ, ಪರಿಸರದ ಜೊತೆಗಿನ ಬದುಕು ನಮಗೆ ಮಾನಸಿಕ ನೆಮ್ಮದಿಯನ್ನು ನೀಡಿದೆ. ಮನೆಯ ಸುತ್ತ ಹೂ, ಹಣ್ಣಿನ ಗಿಡಗಳು ಇರುವ ಕಾರಣ ವಿವಿಧ ಜಾತಿಯ ಪಕ್ಷಿಗಳು ಬರುತ್ತವೆ. ಗಿಡಗಳನ್ನು ಬೆಳೆಸುವುದು, ಅದರ ಪಾಲನೆಯಲ್ಲಿ ನಾವಿಬ್ಬರೂ ತೊಡಗಿಕೊಳ್ಳುವುದರಿಂದ ಮಾನಸಿಕ ತೃಪ್ತಿ ಇದೆ. ನಮಗೆ ಬೇಕಾದ ತರಕಾರಿ, ಸೊಪ್ಪು ನಾವೇ ಬೆಳೆಸುತ್ತೇವೆ. ಸಾವಯವ ಗೊಬ್ಬರ ಬಳಸುತ್ತೇವೆ ಎಂದು ಪ್ರಶಸ್ತಿ ಸ್ವೀಕರಿಸಿದ ಪುಷ್ಪ ಹಾಗೂ ಕೇಶವ ದಂಪತಿ ಹೇಳಿದರು.

ಅತಿಥಿಯಾಗಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಶ್ರೀನಿವಾಸ ನಾಯಕ್ ಇಂದಾಜೆ, ತುಳು ಸಾಹಿತಿ ಚಂದ್ರಹಾಸ ಕಣಂತೂರು ಮಾತನಾಡಿದರು.

ದಕ್ಷಿಣ ಕನ್ನಡ ಜಿಲ್ಲಾ ಸ್ವಚ್ಚತಾ ರಾಯಭಾರಿ ಶೀನಶೆಟ್ಟಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಥಮವಾಗಿ ಪುಷ್ಪ- ಕೇಶವ ಅವರ ಮನೆಯನ್ನು ಸ್ವಚ್ಛ ಮನೆ ಎಂದು ಗುರುತಿಸಿ ಗೌರವಿಸಲಾಗಿದೆ. ಈ ಅಭಿಯಾನ ಮುಂದುವರಿಯಲಿದ್ದು, ಸ್ವಚ್ಛ ಮನೆ ಸ್ವಚ್ಛ ಮನಸ್ಸು, ಸ್ವಚ್ಛ ಪರಿಸರವು ಜನರ ಮೂಲಕ ವ್ಯಾಪಿಸಬೇಕು. ಪರಿಸರ ಸ್ನೇಹಿ ಬದುಕು ನಮ್ಮದಾಗ ಬೇಕು ಎಂದರು.

ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪ ರಾಜ್ ಬಿ.ಎನ್., ಮಂಗಳೂರು ಆಕಾಶವಾಣಿಯ ನಿವೃತ್ತ ಉದ್ಯೋಗಿ ಶ್ಯಾಮ್ ಭಟ್, ಅಪ್ನಾದೇಶ್ ಸ್ವಚ್ಛತಾ ಬಳಗದ ಮುಖಂಡರಾದ ಇಸ್ಮಾಯಿಲ್ ಕಣಂತೂರು ಭಾಗವಹಿಸಿದ್ದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-29-124632419

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.