ಉಳ್ಳಾಲ: ಪೆರ್ಮನ್ನೂರು ಗ್ರಾಮದ ಕೆರೆಬೈಲ್ ಗುಡ್ಡೆ, ಚೆಂಬುಗುಡ್ಡೆಯಲ್ಲಿ ಕೊರಗ ತನಿಯ ಹಾಗೂ ಗುಳಿಗ ದೈವದ ಕೋಲದ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು.

ಕಾಪಿಕಾಡ್ ಮಂತ್ರದೇವತಾ ಕೊರಗಜ್ಜ ಸಾನಿಧ್ಯದ ಧರ್ಮದರ್ಶಿ ಪ್ರಶಾಂತ್ ಕಾಪಿಕಾಡ್ ಕಾರ್ಯಕ್ರಮವನ್ನು ಉದ್ಘಾಟಿಸಿ, ‘ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯಲಿದ್ದು, ಮುಂದಿನ 50ನೇ ವರ್ಷದ ಕೋಲವನ್ನು ಆಚರಿಸುವ ಸಂಕಲ್ಪವಿದೆ’ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ಮಂಗಳೂರು ವಿಭಾಗದ ಹರಿಕೃಷ್ಣ ಮಂಗಳೂರು ಧಾರ್ಮಿಕ ಉಪನ್ಯಾಸ ನೀಡಿದರು. ವಕೀಲ ದಿನಕರ್ ಶೆಟ್ಟಿ ಮಾತನಾಡಿದರು.

ದಿನೇಶ್ ಅತ್ತಾವರ, ಸುಮಂಗಲಾ ದಂಪತಿ ಪುತ್ರ, ‘ಸ್ಕೂಲ್ ಲೀಡರ್’ ಸಿನಿಮಾದ ನಟ ಲವಣಚಂದ್ರ ಕೆರೆಬೈಲ್ ಅವರನ್ನು ಅಭಿನಂದಿಸಲಾಯಿತು. ಬಹುಮಾನ ವಿತರಣೆ ನಡೆಯಿತು.

ಚೆಂಬುಗಡ್ಡೆ ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದ ಅಧ್ಯಕ್ಷ ಹರೀಶ್ಚಂದ್ರ, ಶ್ರೀರಾಮ ಭಜನಾ ಮಂದಿರ ಕೊಲ್ಯದ ಅಧ್ಯಕ್ಷ ಪ್ರೀತಮ್ ಕೋಟ್ಯಾನ್, ಉದ್ಯಮಿಗಳಾದ ಸಂದೀಪ್ ಕೊಲ್ಯ, ವಿದ್ಯಾ ಮನೋಜ್, ಉಳ್ಳಾಲ ನಗರಸಭೆ ಸದಸ್ಯ ರಾಜೇಶ್ ಯು.ಇ., ಕೊರಗತನಿಯ ಸೇವಾ ಸಮಿತಿ ಅಧ್ಯಕ್ಷ ಪ್ರವೀಣ್ ರೈ ಭಾಗವಹಿಸಿದ್ದರು. ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-29-2000299488

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.