ಉಳ್ಳಾಲ: ಬಾವಿ ಕೊರೆಯುತ್ತಿದ್ದ ವೇಳೆ ಮಣ್ಣು ತುಂಬಿದ್ದ ಕಬ್ಬಿಣದ ಬಕೆಟ್ ಕ್ರೇನ್ನ ಕೊಕ್ಕೆಯಿಂದ ಬೇರ್ಪಟ್ಟು 30 ಅಡಿ ಆಳಕ್ಕೆ ಬಿದ್ದು ಕಾರ್ಮಿಕ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕು ಮಲ್ಲಾ ಪುರದ ಶಿವಕುಮಾರ್ ಜಿ.ಕೆ (30) ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ಕುತ್ತಾರು ಪದವಿನ ಸಲಾತ್ ನಗರದಲ್ಲಿ ನಡೆದಿದೆ.

ಸಲಾತ್ ನಗರದ ಖಾಲಿ ನಿವೇಶನದಲ್ಲಿ ಬಾವಿ ತೋಡಲಾಗುತ್ತಿತ್ತು. 6 ಕಾರ್ಮಿಕರ ಪೈಕಿ ಶಿವಕುಮಾರ್ ಮತ್ತು ಇಬ್ಬರು 30 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದರು. ಈ ಸಂದರ್ಭ ಬಕೆಟ್ ಬಾವಿಗೆ ಬಿದ್ದು ಶಿವಕುಮಾರ್ ತಲೆಗೆ ಬಡಿದಿದೆ. ಬಾವಿಯೊಳಗಿದ್ದ ಇನ್ನಿಬ್ಬರು ಕಾರ್ಮಿಕರಿಗೆ ಗಾಯಗಳಾಗಿವೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಕುಮಾರ್ಗೆ ಪತ್ನಿ, ಮೂರು ವರ್ಷದ ಪುತ್ರ, ಒಂದು ವರ್ಷದ ಪುತ್ರಿ ಇದ್ದಾರೆ. ತೊಕ್ಕೊಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260328-29-1292761569

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.