ಉಳ್ಳಾಲ: ಎಲ್ಲರೂ ಒಂದಾಗಿ ಬದುಕಬೇಕು ಎನ್ನುವ ಮನಃಸ್ಥಿತಿ ಬೆಳೆಸಿದಾಗ ಮಾತ್ರ ಸಮತೋಲನ ಸಾಧ್ಯ ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಕರ್ನಾಟಕ ಪಶುವೈದ್ಯಕೀಯ ಸಂಘದ ದ.ಕ ಜಿಲ್ಲಾ ಘಟಕ, ಫೀಡ್ ಅನಿಮಲ್ಸ್, ಸೇವ್ ಅನಿಮಲ್ಸ್ ಟ್ರಸ್ಟ್ ಮಂಗಳೂರು, ಅಸ್ತ್ರ ಗ್ರೂಪ್ ಆಶ್ರಯದಲ್ಲಿ ನಂದಾ ದೀಪ ಸೇವಾ ಬಳಗ ಮಡ್ಯಾರ್ ಕೋಟೆಕಾರ್ ಸಹಕಾರದೊಂದಿಗೆ ಮಡ್ಯಾರ್ ಶಾಸ್ತಾರ ಅಶ್ವತ್ಥಕಟ್ಟೆ ಮುಂಭಾಗದಲ್ಲಿ ಶನಿವಾರ ವಿಶ್ವಪಶು ವೈದ್ಯಕೀಯ ದಿನಾಚರಣೆ ಅಂಗವಾಗಿ ಸಾಕು ಪ್ರಾಣಿಗಳಿಗೆ ಹಾಗೂ ಬೀದಿ ನಾಯಿಗಳಿಗೆ ಹಮ್ಮಿಕೊಂಡಿದ್ದ ರೇಬಿಸ್ ನಿವಾರಣಾ ಉಚಿತ ಲಸಿಕಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕ ಪಶುವೈದ್ಯಕೀಯ ಸಂಘದ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಡಾ.ಅರುಣ್ ಕುಮಾರ್ ಶೆಟ್ಟಿ ಎನ್. ಮಾತನಾಡಿ, ನಾಲ್ಕನೇ ಶನಿವಾರ ವಿಶ್ವದಾದ್ಯಂತ ವಿಶ್ವ ಸಾಕುಪ್ರಾಣಿ ದಿನ ಆಚರಿಸಲಾಗುತ್ತದೆ. ಈ ದಿನವು ಪಶುವೈದ್ಯರ ಸೇವೆ, ಜಾನುವಾರು ಆರೋಗ್ಯ ಮತ್ತು ಸಾರ್ವಜನಿಕ ಆರೋಗ್ಯದ ಮಹತ್ವವನ್ನು ನೆನಪಿಸುವ ದಿನವಾಗಿದೆ. ವಿಶ್ವದಾದ್ಯಂತ ಜನರಿಗೆ ಪ್ರಾಣಿ ಮೂಲದ ಪ್ರೊಟೀನ್ ಆಹಾರಗಳು ಮಾಂಸ, ಮೊಟ್ಟೆಯನ್ನು ಸುರಕ್ಷಿತವಾಗಿ ಒದಗಿಸುವ ವ್ಯವಸ್ಥೆ ಮುಖ್ಯ. ಇದು ಆಹಾರ ಭದ್ರತೆ ಮತ್ತು ಸುರಕ್ಷಿತ ಆಹಾರಕ್ಕೆ ನೇರವಾಗಿ ಸಂಬಂಧಿಸಿದೆ. ಜನರಿಗೆ ನೀಡುವ ಆಹಾರವು ಸುರಕ್ಷಿತವಾಗಿರಲು, ಜಾನುವಾರುಗಳ ಆರೋಗ್ಯ ಉತ್ತಮವಾಗಿರಬೇಕು ಎಂದರು.

ಆದ್ದರಿಂದ ಪಶು ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ತಿಂಗಳಿಗೆ ಸರಾಸರಿ 2 ಸಾವಿರ ನಾಯಿಗಳ ಕಡಿತ ಪ್ರಕರಣಗಳು ದಾಖಲಾದರೆ 1600ರಷ್ಟು ಮನೆ ನಾಯಿಗಳೇ ಕಡಿದಿರುತ್ತವೆ. ಈ ಕಾರಣದಿಂದ ಮನೆ ನಾಯಿಗಳಿಗೆ ಸಮಯಕ್ಕೆ ಸರಿಯಾಗಿ ಲಸಿಕೆ ನೀಡುವುದು ಅಗತ್ಯ.ರೇಬಿಸ್ ರೋಗವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವುದು ಸಾಧ್ಯ. ಅದಕ್ಕಾಗಿ ಪ್ರತಿಯೊಬ್ಬರೂ ಸಾಕುಪ್ರಾಣಿಗಳಿಗೆ ನಿಯಮಿತವಾಗಿ ಲಸಿಕೆ ಕೊಡಿಸುವುದು, ಜಾಗೃತಿ ಮೂಡಿಸುವುದು ಮುಖ್ಯ ಎಂದರು.

ಅಸ್ತ್ರ ಗ್ರೂಪ್ ವ್ಯವಸ್ಥಾಪಕ ನಿರ್ದೇಶಕ ಲಂಚುಲಾಲ್, ಫೀಡ್ ಅನಿಮಲ್ಸ್, ಸೇವ್ ಅನಿಮಲ್ಸ್ ಟ್ರಸ್ಟ್ನ ರಜನಿ ಶೆಟ್ಟಿ, ಕೋಟೆಕಾರು ಪಟ್ಟಣ ಪಂಚಾಯಿತಿ ಸದಸ್ಯ ಹರೀಶ್ ರಾವ್ ಮಡ್ಯಾರ್, ಸುರೇಶ್ ಗುರೂಜಿ, ಪಶು ವೈದ್ಯಕೀಯ ಸಂಘದ ಉಪಾಧ್ಯಕ್ಷ ಡಾ.ಚಂದ್ರಶೇಖರ್, ನಡಾರು ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ರಮೇಶ್ ಎಚ್.ಸಾಮಾನಿ, ಸದಾನಂದ ನಡಾರು, ಶೋಭಾ ಗಟ್ಟಿ, ಅನು ಸುವರ್ಣ, ದಾಮೋದರ್ ಶೆಟ್ಟಿ, ಸುಮಿತ್ ಮಡ್ಯಾರ್, ಶೋಭಾ ರಾಣಿ, ಕೋಟೆಕಾರು ಪಶು ಇಲಾಖೆ ಸಿಬ್ಬಂದಿ ಆಶಾಲತಾ, ಜಯಂತಿ, ರಜನಿ ಕುತ್ತಾರ್ ಭಾಗವಹಿಸಿದ್ದರು. ಹರೀಶ್ ರಾಜಕುಮಾರ್ ನಿರೂಪಿಸಿದರು. ಡಾ.ನಿತಿನ್ ಪ್ರಭು ಸ್ವಾಗತಿಸಿ, ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260426-29-23712048

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.