ಉಳ್ಳಾಲ: ಇಲ್ಲಿನ ಚೀರುಂಭ ಭಗವತಿ ಕ್ಷೇತ್ರದ ನಡಾವಳಿ ಸಂದರ್ಭ ಪೂರ್ವದಿಕ್ಕಿನಲ್ಲಿ ದಿ.ಲಕ್ಷ್ಮೀ ಮೋನಪ್ಪ ಮೇಲಂಗಡಿ ಅವರ ಸ್ಮರಣಾರ್ಥ ಅವರ ಮಕ್ಕಳು ಸುಮಾರು ₹35ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಪೂರ್ವದ್ವಾರ ಪಡಿಬಿಡಾರವನ್ನು ಉದ್ಯಮಿ ಗೋಪಾಲ್ ಉಚ್ಚಿಲ್ ಶನಿವಾರ ಉದ್ಘಾಟಿಸಿದರು.

ದಕ್ಷಿಣ ದಿಕ್ಕಿನಲ್ಲಿ ಅಸ್ತ್ರ ಸಮೂಹ ಸಂಸ್ಥೆಯ ಮಾಲೀಕ ಲಾಂಚುಲಾಲ್ ಅವರು ಕೊಡುಗೆಯ ರೂಪದಲ್ಲಿ ನಿರ್ಮಿ ಸಲಿರುವ ಪಡಿ ಬಿಡಾರ ಮಹಾದ್ವಾರ ನಿರ್ಮಾಣ ಕಾಮಗಾರಿಗೆ ಲಾಂಚುಲಾಲ್ ಶಿಲಾನ್ಯಾಸ ನೆರವೇರಿಸಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಚೀರುಂಭ ಭಗವತಿ ಕ್ಷೇತ್ರ ತೀಯಾ ಸಮಾಜ ಉಳ್ಳಾಲದ ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ, ಬಿಜೆಪಿ ಮುಖಂಡ ನಳಿನ್ ಕುಮಾರ್ ಕಟೀಲ್ ಮಾತನಾಡಿದರು.

ನಳಿನ್ ಕುಮಾರ್ ಕಟೀಲ್ ಅವರು ಸಂಸದರಾಗಿದ್ದ ಸಂದರ್ಭ ಮಂಜೂರು ಮಾಡಿದ್ದ ₹ 5 ಲಕ್ಷ ಅನುದಾನದಲ್ಲಿ ನಿರ್ಮಾಣವಾದ ತಡೆಗೋಡೆಯನ್ನು ಉದ್ಘಾಟಿಸಿದರು. ಕ್ಷೇತ್ರದ ಆವರಣದಲ್ಲಿ ಶಾಸಕ ಯು.ಟಿ.ಖಾದರ್ ಅವರ ಮುತುವರ್ಜಿಯಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ದೇವಸ್ಥಾನದ ಅಂಗಳದಲ್ಲಿ ಸುಮಾರು ₹ 25ಲಕ್ಷ ವೆಚ್ಚದಲ್ಲಿ ಅಳವಡಿಸಲಾದ ಇಂಟರ್ಲಾಕ್ ವ್ಯವಸ್ಥೆಯನ್ನು ಮೂಡ ಅಧ್ಯಕ್ಷ ಸದಾಶಿವ ಉಳ್ಳಾಲ್ ಉದ್ಘಾಟಿಸಿದರು.

ಆಡಳಿತ ಮೊಕ್ತೇಸರ ಸುರೇಶ್ ಭಟ್ನಗರ, ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ, ಪ್ರಧಾನ ಕಾರ್ಯದರ್ಶಿ ಯಶವಂತ್ ಉಚ್ಚಿಲ್, ಕೋಶಾಧಿಕಾರಿ ಜಗದೀಶ್ ಉಳ್ಳಾಲಬೈಲ್, ಆಡಳಿತ ಸಮಿತಿ ಪದಾಧಿಕಾರಿಗಳು, ಆಚಾರಪಟ್ಟವರು, ಗುರಿಕಾರರು, ಯುವ ವೇದಿಕೆ ಹಾಗೂ ಮಹಿಳಾ ವೇದಿಕೆಯ ಪದಾಧಿಕಾರಿಗಳು, ಸದಸ್ಯರು ಇದ್ದರು. ಸುಕೇಶ್ ಮಂಜನಾಡಿ ಸ್ವಾಗತಿಸಿ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-29-433380337

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.