ಉಪ್ಪಿನಂಗಡಿ: ಅನಾರೋಗ್ಯಕ್ಕೀಡಾಗಿ ಚಿಕಿತ್ಸೆ ಪಡೆಯುವುದಕ್ಕಿಂತ ಮೊದಲು ನಾವು ವೈದ್ಯರಿಂದ ತಪಾಸಣೆ ಮಾಡಿಸಿ ಕಾಯಿಲೆ ಪತ್ತೆ ಹಚ್ಚುವುದು ಮತ್ತು ಅದನ್ನು ತಡೆಯುವಲ್ಲಿ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಯೆನೆಪೋಯ ವೈದ್ಯಕೀಯ ಕಾಲೇಜಿನ ನಿರ್ದೇಶಖಿ ಡಾ.ಅಶ್ವಿನಿ ಶೆಟ್ಟಿ ಹೇಳಿದರು.

ಕರಾಯದಲ್ಲಿ ಹಿದಾಯ ಫೌಂಡೇಷನ್ ಮಂಗಳೂರು ಮತ್ತು ಅಲ್ ಅಸಾಸ್ ಫೌಂಡೇಷನ್ ಟ್ರಸ್ಟ್ ಕರಾಯ, ಶಂಸುಲ್ ಹುದಾ ಯಂಗ್ಮೆನ್ಸ್ ಅಸೋಸಿಯೇಷನ್ ಕರಾಯ ಮತ್ತು ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆ ದೇರಳಕಟ್ಟೆಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವೈದ್ಯಕೀಯ ತಪಾಸಣಾ ಶಿಬಿರ, ಆರೋಗ್ಯ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಹಿದಾಯ ಫೌಂಡೇಷನ್ ಕಾರ್ಯಾ ಧ್ಯಕ್ಷ ಮೊಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿ ಮಾತನಾಡಿ, 15 ವರ್ಷಗಳಿಂದ ಜಿಲ್ಲೆಯ ಹಲವು ಕಡೆ ಇಂತಹ ಶಿಬಿರ ಆಯೋಜಿಸಲಾಗುತ್ತಿದೆ ಎಂದರು.

ಕರಾಯ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ಹಿದಾಯ ಫೌಂಡೇಷನ್ ಗ್ರಾಮೀಣ ಆರೋಗ್ಯ ವಿಭಾಗದ ಉಸ್ತುವಾರಿ ಅಬ್ದುಲ್ ಹಕೀಂ ಕಲಾಯಿ, ಹಿದಾಯ ಫೌಂಡೇಷನ್ ದುಬೈ ಘಟಕದ ಅಹಮದ್ ಬಾವಾ ಉಪ್ಪಿನಂಗಡಿ ಮಾತನಾಡಿದರು.

ಕರಾಯ ಬದ್ರಿಯಾ ಜುಮಾ ಮಸೀದಿ ಕಾರ್ಯಾಧ್ಯಕ್ಷ ಝಕರಿಯಾ ಅಗ್ನಾಡಿ, ಕೋಶಾಧಿಕಾರಿ ಅಬ್ದುಲ್ ಖಾದರ್, ಕರಾಯ ಅಲ್ಬಿರ್ ಸ್ಕೂಲ್ ಅಧ್ಯಕ್ಷ ಅಬೂಬಕ್ಕರ್ ಸಿದ್ದಿಕ್, ಉಪಾಧ್ಯಕ್ಷ ಫಾರೂಕ್, ತೊಯ್ಬಾ ಗಲ್ಫ್ ಕಮಿಟಿ ಕರಾಯ ಅಧ್ಯಕ್ಷ ಸಮದ್, ಕರಾಯ ಜನತಾ ಕಾಲೊನಿ ಮದ್ರಸ ಅಧ್ಯಕ್ಷ ಅಬ್ದುಲ್ ರಹಿಮಾನ್, ಕರಾಯ ಶಂಸುಲ್ ಹುದಾ ಯಂಗ್ಮೆನ್ಸ್ ಅಧ್ಯಕ್ಷ ತಲ್ಹತ್ ಡಿ.ಕೆ., ಡಾ.ಫಾತಿಮಾ ಸುಹಾನ, ಡಾ.ಅಝ್ಮಲ್, ಹಿದಾಯ ಫೌಂಡೇಷನ್ ಉಪಾಧ್ಯಕ್ಷ ಆಶಿಕ್ ಇಕ್ಬಾಲ್, ಸದಸ್ಯರಾದ ಕೆ.ಎಸ್.ಅಬೂಬಕ್ಕರ್, ಹಕೀಂ ಸುನ್ನತ್ ಕೆರೆ, ಪಿ.ಮಹಮ್ಮದ್, ಬಶೀರ್ ಬಗ್ಗ, ಅಬ್ದುಲ್ ರಜಾಕ್ ಕುಪ್ಪೆಪದವು, ಅಬ್ದುಲ್ ರಹಿಮಾನ್ ಯುನಿಕ್ ಭಾಗವಹಿಸಿದ್ದರು.

ಹಿದಾಯ ಫೌಂಡೇಷನ್ ಕಾರ್ಯದರ್ಶಿ ಅಬ್ದುಲ್ ರಜಾಕ್ ಅನಂತಾಡಿ ಸ್ವಾಗತಿಸಿ, ಅಲ್ಬಿರ್ ಸ್ಕೂಲ್ ಸಂಚಾಲಕ ಅಬ್ದುಲ್ ಶುಕೂರ್ ದಾರಿಮಿ ವಂದಿಸಿದರು. ಇಲ್ಯಾಸ್ ಕರಾಯ, ಕೆ.ಎಸ್.ಅಬ್ದುಲ್ಲ ನಿರ್ವಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260414-29-43837252

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.