ಉಪ್ಪಿನಂಗಡಿ: ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿಯೊಬ್ಬರು ಆರ್ಥಿಕ ಸಹಾಯ ಯಾಚಿಸಿ ಮನವಿಯಲ್ಲಿ ಬರೆದಿದ್ದ ಸಂಪರ್ಕ ಸಂಖ್ಯೆಯನ್ನು ಬಳಸಿ ಮಂತ್ರಾಲಯದ ಗುರುರಾಯರ ಮಠದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಆ ವ್ಯಕ್ತಿಯನ್ನೇ ವಂಚಿಸಿದ ಘಟನೆ ನಡೆದಿದೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಬೆಳ್ತಂಗಡಿ ತಾಲ್ಲೂಕು ಇಳಂತಿಲ ಗ್ರಾಮದ ನಿವಾಸಿ ಯಶೋಧರ ಸಿಂಗ್ ಎಂಬುವರು ಅನಾರೋಗ್ಯದಿಂದ ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದು, ಅವರ ಚಿಕಿತ್ಸೆಗೆ ನೆರವಾಗುವಂತೆ ಅವರ ಬಂಧುಗಳು ಸಾಮಾಜಿಕ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ವಂಚಕರು, ಮನವಿಯಲ್ಲಿದ್ದ ಯಶೋಧರ ಅವರ ಪುತ್ರ ಸುಧಾಂಷ್ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಿ ‘ನಾವು ಮಂತ್ರಾಲಯದ ರಾಯರ ಮಠದಿಂದ ಮಾತನಾಡುತ್ತಿದ್ದೇವೆ. ನಿಮ್ಮ ಸಮಸ್ಯೆಯ ಬಗ್ಗೆ ತಿಳಿದುಕೊಂಡೆವು. ಮಠದಿಂದ ನಿಮಗೆ ₹ 3 ಲಕ್ಷ ಆರ್ಥಿಕ ನೆರವು ನೀಡುತ್ತೇವೆ. ಆದರೆ, ಸರ್ಕಾರಿ ನಿಯಮದಂತೆ ಶೇ 10ರಷ್ಟು ತೆರಿಗೆ ಪಾವತಿಸಬೇಕಾಗಿರುವುದರಿಂದ ನೀವು ₹ 30 ಸಾವಿರವನ್ನು ನಮಗೆ ಪಾವತಿಸಬೇಕಾಗುತ್ತದೆ’ ಎಂದು ತಿಳಿಸಲಾಯಿತು.

ಸುಧಾಂಷ್, ನನ್ನಲ್ಲಿ ₹ 28 ಸಾವಿರ ಮಾತ್ರ ಇದೆ ಎಂದು ತಿಳಿಸಿದ್ದಕ್ಕೆ ಸರಿ ಅದನ್ನಾದರೂ ಕಳುಹಿಸಿ ಎಂದು ತಿಳಿಸಿದ್ದು, ನಂಬಿದ ಆತ ₹ 28 ಸಾವಿರವನ್ನು ಕಳುಹಿಸಿದ್ದಾರೆ. ₹ 3 ಲಕ್ಷ ಬಾರದೇ ಇದ್ದಾಗ ತಾನು ಮೋಸ ಹೋಗಿರುವುದಾಗಿ ತಿಳಿದು ಪ್ರಕರಣದ ಬಗ್ಗೆ ವಂಚಕನ ವಿರುದ್ಧ ದೂರು ಸಲ್ಲಿಸಿದ್ದಾರೆ. ಧಾರ್ಮಿಕ ಕ್ಷೇತ್ರದ ಹೆಸರು ಬಳಸಿ ವಂಚಿಸುವ ಜಾಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಲು ಪೊಲಿಸ್ ಇಲಾಖೆ ಮುಂದಾಗಬೇಕು ಎಂದು ಆಗ್ರಹ ವ್ಯಕ್ತವಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-29-2034258324

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.