ಉಪ್ಪಿನಂಗಡಿ: ಬಸ್ ನಿಲ್ದಾಣದ ವೃತ್ತ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗಡಿ ಗುಂಡ್ಯ ಸೇರಿದಂತೆ 2 ಕಡೆ ಒಟ್ಟು 6 ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಪೊಲೀಸ್ ಇಲಾಖೆ ಮುಂದಾಗಿದೆ.

ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಪದ್ಮುಂಜದಲ್ಲಿ ಪೊಲೀಸ್ ಹೆಡ್ ಕಾನ್ಸ್ಟೆಬಲ್ ಒಬ್ಬರ ಮನೆಯಲ್ಲಿ ನಡೆದ ಕಳವು ಪ್ರಕರಣ, ಉಪ್ಪಿನಂಗಡಿ ಪೇಟೆಯಲ್ಲಿ ಒಂದೇ ದಿನ ರಾತ್ರಿ 4 ಕಡೆ ನಡೆದ ಕಳ್ಳತನ, 15 ದಿನಗಳಿಂದ ಪೇಟೆಯಲ್ಲಿ ವಾಹನ ಸಂಚಾರದಲ್ಲಿ ಉಂಟಾಗುವ ಅವ್ಯವಸ್ಥೆ, ವಾಹನ ದಟ್ಟಣೆ, ಅಪರಾಧ ಘಟನಾವಳಿ ನಿಯಂತ್ರಿಸುವ ಸಂಬಂಧ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿದೆ.

ಉಪ್ಪಿನಂಗಡಿ ಹೃದಯ ಭಾಗದ ವೃತ್ತದಲ್ಲಿ 4 ಕ್ಯಾಮರಾಗಳನ್ನು ಮತ್ತು ಶಿರಾಡಿ ಗ್ರಾಮದ ಗುಂಡ್ಯ ಜಂಕ್ಷನ್ನಲ್ಲಿ 2 ಕ್ಯಾಮೆರಾ ಅಳವಡಿಸಿದೆ. ಈ ಜಿಲ್ಲೆಯಾದ್ಯಂತ ಅನುಷ್ಠಾನ ಆಗಲಿದ್ದು, ತಾಲ್ಲೂಕು ಕೇಂದ್ರ, ಜನನಿಬಿಡ ರಸ್ತೆ, ಜಂಕ್ಷನ್, ಪೇಟೆ, ಪಟ್ಟಣಗಳಲ್ಲಿ ಕ್ಯಾಮೆರಾ ಅಳವಡಿಸಲು ಪೊಲೀಸ್ ಇಲಾಖೆ ಯೋಜನೆ ರೂಪಿಸಿದೆ.

ವಾಹನ ಒಂದಣಿ ಸಂಖ್ಯೆ, ವ್ಯಕ್ತಿಯ ಚಿತ್ರಣ ದಾಖಲು: ಆಧುನಿಕ ಕ್ಯಾಮೆರಾ ಇದಾಗಿದ್ದು, ಕ್ಯಾಮೆರಾ ಮುಂದೆ ವಾಹನ ಹೋಗುತ್ತಿದ್ದಂತೆ ವಾಹನದ ನೋಂದಣಿ ಸಂಖ್ಯೆ ಸಹಿತ ವ್ಯಕ್ತಿಯ ಚಿತ್ರ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ದಾಖಲಾಗುತ್ತದೆ. ಪೊಲೀಸ್ ಠಾಣೆ ಮತ್ತು ದ.ಕ. ಜಿಲ್ಲಾ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಕ್ಯಾಮೆರಾ ನಿಯಂತ್ರಣ ಮಾಡಲಾಗುತ್ತದೆ. ವಾಹನ ಚಾಲಕರು ನಿಯಮ ಉಲ್ಲಂಘಿಸಿದರೆ ಇದರ ಮೂಲಕ ತಿಳಿಯಬಹುದು. ಸಂಚಾರ ನಿಯಮ ಉಲ್ಲಂಘನೆ, ಅಪರಾಧ ಪತ್ತೆಗೆ ಕ್ಯಾಮೆರಾ ಸಹಕಾರಿ ಆಗಲಿದೆ ಎಂದು ಉಪ್ಪಿನಂಗಡಿ ಪಿಎಸ್ಐ ಸುತೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

10 ವರ್ಷಗಳ ಹಿಂದೆ ಉಪ್ಪಿನಂಗಡಿ ಪೇಟೆಯಲ್ಲಿ ನಡೆಯುತ್ತಿದ್ದ ಕಳವು ಪ್ರಕರಣದಿಂದಾಗಿ ಉದ್ಯಮಿ ಕರುಣಾಕರ ಸುವರ್ಣ ನೇತೃತ್ವದಲ್ಲಿ ವರ್ತಕರು ಮತ್ತು ಉದ್ಯಮಿಗಳ ಸಹಕಾರ ಪಡೆದು ನಿಧಿ ಸಂಗ್ರಹಿಸಿ ಉಪ್ಪಿನಂಗಡಿ ವೃತ್ತ, ಬೈಪಾಸ್ ರಸ್ತೆ, ದೇವಸ್ಥಾನದ ಆವರಣ, ಹಳೆಯ ಬಸ್ ನಿಲ್ದಾಣ, ಬಸ್ ನಿಲ್ದಾಣ, ಗಾಂಧಿಪಾರ್ಕ್ನಲ್ಲಿ 10 ಕ್ಯಾಮೆರಾ ಅಳವಡಿಸಿ ನಿರ್ವಹಣೆ ಜವಾಬ್ದಾರಿಯನ್ನು ಪೊಲೀಸ್ ಠಾಣೆಗೆ ನೀಡಲಾಗಿತ್ತು.

ಬಳಿಕ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಬಂದಿದ್ದವು. ಕ್ರಮೇಣ ಅದರ ನಿರ್ವಹಣೆ ಆಗದ ಕಾರಣ 3 ವರ್ಷಗಳಿಂದ ಅದು ನಿಷ್ಪ್ರಯೋಜಕವಾಗಿದೆ. ಕೊಡುಗೆ ರೂಪದಲ್ಲಿ ನೀಡಿದ ವ್ಯವಸ್ಥೆಯನ್ನು ಪೊಲೀಸರು ಸರಿಯಾಗಿ ನಿರ್ವಹಣೆ ಮಾಡದಿರುವ ಬಗ್ಗೆ ಇಲಾಖೆ ವಿರುದ್ಧ ಟೀಕೆ ವ್ಯಕ್ತವಾಗುತ್ತಿತ್ತು. ಇದೀಗ ಪೊಲೀಸ್ ಇಲಾಖೆಯೆ ಅಗತ್ಯದ ಬೇಡಿಕೆ ಈಡೇರಿಸಿದ್ದು, ಇದರ ನಿರ್ವಹಣೆ ಉತ್ತಮವಾಗಿರಲಿ ಮತ್ತು ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಪ್ರಕರಣಗಳು ನಿಯಂತ್ರಣಕ್ಕೆ ಸಿಗಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-29-835389678

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.