ಉಪ್ಪಿನಂಗಡಿ: ಬಜತ್ತೂರು ಗ್ರಾಮದ ವಳಾಲುನಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟಕ್ಕೆ ಶನಿವಾರ ಬ್ರೇಕ್ ಬಿದ್ದಿದ್ದು, ಸ್ಥಳಕ್ಕೆ ಬಂದಿದ್ದ ಲಾರಿಗಳು ಹಿಂತಿರುಗಿ ಹೋಗಿವೆ. ಮರಳು ಗಣಿಗಾರಿಕೆ ಅಡ್ಡೆ ಖಾಲಿಯಾಗಿ ಬಿಕೊ ಎನ್ನುತ್ತಿದೆ.

ಪುತ್ತೂರು ತಾಲ್ಲೂಕು ಬಜತ್ತೂರು ಗ್ರಾಮದ ವಳಾಲು ಸಮೀಪ ನೇತ್ರಾವತಿ ನದಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಡೆಯುತ್ತಿರುವ ಕಾಮಗಾರಿಯೊಂದರ ಸಲುವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ. ಇಲ್ಲಿಂದ ದಿನಕ್ಕೆ ನೂರಾರು ಲಾರಿಗಳಲ್ಲಿ ಮರಳು ಸಾಗಾಟವಾಗುತ್ತಿದ್ದು, ಅವುಗಳು ನಿರ್ದಿಷ್ಟ ಜಾಗಕ್ಕೆ ಹೋಗದೆ ದೊಡ್ಡ ಮಟ್ಟದ ಗುತ್ತಿಗೆದಾರರು, ಹೊರ ಜಿಲ್ಲೆಗಳಿಗೆ ಅಕ್ರಮವಾಗಿ ಸಾಗಾಟ ಆಗುತ್ತಿರುವ ಬಗ್ಗೆ ಗಂಭೀರ ಆರೋಪ, ದೂರು ವ್ಯಕ್ತವಾಗಿದ್ದವು. ‘ಪ್ರಜಾವಾಣಿ’ಯಲ್ಲಿ ಈ ಬಗ್ಗೆ ವಿಶೇಷ ವರದಿ ಪ್ರಕಟವಾಗಿತ್ತು. ಮರಳು ಗಣಿಗಾರಿಕೆ ಅಡ್ಡೆಗೆ ಎಂದಿನಂತೆ ಬೆಳಿಗ್ಗೆಯಿಂದಲೇ ಲಾರಿಗಳು ಬರಲಾರಂಭಿಸಿದ್ದವು. 9 ಗಂಟೆಗೆ ಸುಮಾರು 70ರಷ್ಟು ಲಾರಿಗಳು ನಿಂತಿದ್ದವು. ಸರತಿಯಲ್ಲಿ ಮರಳು ತುಂಬಿಸಲಾಗುತ್ತಿತ್ತು. 10 ಗಂಟೆಗೆ ಲಾರಿಗಳು ಮರಳು ತುಂಬಿಸದೆ ಹಿಂತಿರುಗಿ ಹೋಗಲಾರಂಭಿಸಿದವು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-29-2077331822

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.