ಉಪ್ಪಿನಂಗಡಿ: ಸ್ವಾತಂತ್ರ್ಯ ಹೋರಾಟ ಗಾರ, ಬ್ರಿಟಿಷರ ವಿರುದ್ಧ ದಂಗೆ ಎದ್ದು ಹುತಾತ್ಮರಾದ ಉಬಾರ್ ಮಂಜ ಬೈದ್ಯರ ಚರಿತ್ರೆಯನ್ನು ಸಮಾಜಕ್ಕೆ ನೆನಪಾಗಿ ಉಳಿಸುವ ಕಾರ್ಯಕ್ಕೆ ದ.ಕ. ಜಿಲ್ಲಾ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಹಾಗೂ ಬೆಳ್ತಂಗಡಿಯ ಸುವರ್ಣ ಪ್ರತಿಷ್ಠಾನ ಮುಂದಾಗಿದೆ. ಮಂಜ ಬೈದ್ಯರು ಹುತಾತ್ಮರಾಗಿ 190ನೇ ವರ್ಷದ ದಿನವಾದ ಮೇ 27ರಂದು ಉಪ್ಪಿನಂಗಡಿಯಲ್ಲಿ ಕ್ರಾಂತಿವೀರ ಮಂಜ ಬೈದ್ಯರ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿದೆ.

ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಕ್ರಾಂತಿವೀರ ಮಂಜ ಬೈದ್ಯ ಸಂಸ್ಮರಣಾ ಸಮಿತಿ ಅಧ್ಯಕ್ಷ ಸಂಪತ್ ಸುವರ್ಣ ಮಾತನಾಡಿ, ಮಂಜ ಬೈದ್ಯರು ಉಪ್ಪಿನಂಗಡಿಯವರಾಗಿದ್ದು, ಬ್ರಿಟಿಷರ ಆಡಳಿತದ ವಿರುದ್ಧ ಸೆಡ್ಡು ಹೊಡೆದು ಅವರ ದಾಸ್ಯದಿಂದ ನಮ್ಮ ಜನರನ್ನು ಮುಕ್ತಗೊಳಿಸಲು ಹೋರಾಟ ಮಾಡಿದ್ದರು. 1837ನೇ ಮೇ 27ರಂದು ಅವರನ್ನು ಬ್ರಿಟಿಷರು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಗಲ್ಲಿಗೇರಿಸಿದರು. ಅವರು ಹುತಾತ್ಮರಾಗಿ 190 ವರ್ಷಗಳಾಗುತ್ತಿವೆ ಎಂದರು.

ಅವರ ದೇಶಪ್ರೇಮ, ಹೋರಾಟದ ಕಿಚ್ಚು, ಸಂಘಟನಾ ಚಾತುರ್ಯ, ನಾಯಕತ್ವದ ಮಾದರಿ ಆದರ್ಶವಾಗಿದೆ. ಅವರ ನೆನಪನ್ನು ಅಮರವಾಗಿರುವಂತೆ ಮಾಡಲು ಜಾತಿ, ಧರ್ಮ, ರಾಜಕೀಯ ಬಿಟ್ಟು ಒಂದಾಗಿ ಉಬಾರ್ ಮಂಜ ಬೈದ್ಯರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.

ವಿವಿಧ ಸಂಘಟನೆಗಳ ಪ್ರಮುಖರಾದ ಡಾ.ನಿರಂಜನ ರೈ, ಸುನಿಲ್ ಕುಮಾರ್ ದಡ್ಡು, ಉಮಾನಾಥ ಶೆಟ್ಟಿ ಪೆರ್ನೆ, ಜಯವಿಕ್ರಮ್ ಕಲ್ಲಾಪು, ಕೃಷ್ಣರಾವ್ ಆರ್ತಿಲ, ಆರ್.ಸಿ.ನಾರಾಯಣ, ಕರುಣಾಕರ ಸುವರ್ಣ, ಡಾ.ರಾಜಾರಾಮ್, ಯು.ರಾಮ, ಶೇಖರ ಗೌಂಡತ್ತಿಗೆ, ರಾಮಚಂದ್ರ ಪೂಜಾರಿ, ವೆಂಕಪ್ಪ ಪೂಜಾರಿ ಮರುವೇಲು, ಅಜಿತ್ ಕುಮಾರ್ ಪಾಲೇರಿ, ಅಶ್ರಫ್ ಬಸ್ತಿಕ್ಕಾರ್, ಮಹಾಲಿಂಗ ಕೆಜೆಕ್ಕಾರು, ಅಶೋಕ್ ಪಡ್ಪು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-29-386321703

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.