ಉಪ್ಪಿನಂಗಡಿ: ಇಲ್ಲಿನ ಪೇಟೆಯಲ್ಲಿ ಅಲ್ಲಲ್ಲಿ ಕಸದ ರಾಶಿ ಬಿದ್ದಿದ್ದು, ಸಾರ್ವಜನಿಕರು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.

ಉಪ್ಪಿನಂಗಡಿ ಪೇಟೆಯಲ್ಲಿ 20 ದಿನಗಳಿಂದ ಕಸ ಗುಡಿಸುವ ಪೌರ ಕಾರ್ಮಿಕರು ಕಾಣಿಸುತ್ತಿಲ್ಲ. ಕಸ ಸಾಗಿಸುವ ವಾಹನವೂ ಬರುತ್ತಿಲ್ಲ. ಹೀಗಾಗಿ ಕಸ ಅಲ್ಲಲ್ಲಿ ಬಿದ್ದುಕೊಂಡಿದೆ. ತಿಂಡಿ, ತಿನಿಸು ತಿಂದು ಅದರ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದೆ. ಕೆಲವು ವರ್ತಕರು ಅಂಗಡಿಯಲ್ಲಿನ ಕಸವನ್ನು ಅಂಗಡಿ ಮುಂದೆಯೇ ಹಾಕುತ್ತಿದ್ದು, ಗಾಳಿ ಬಂದಾಗ ಕಸ ಪೇಟೆಯಲ್ಲಿ ಹಾರಾಡುತ್ತಿದೆ.

ರಜೆಯಲ್ಲಿ ತೆರಳಿದ ಪೌರಕಾರ್ಮಿಕರು: ಉಪ್ಪಿನಂಗಡಿ ಪಂಚಾಯಿತಿಯಲ್ಲಿ ಈ ಹಿಂದೆ ನಾಲ್ವರು ಪೌರ ಕಾರ್ಮಿಕರು ಇದ್ದರು. ಅವರ ಪೈಕಿ ಮೂವರು ನಿವೃತ್ತರಾಗಿದ್ದಾರೆ. ಈ ಮಧ್ಯೆ 2 ವರ್ಷದಿಂದ ಕಸ ವಿಲೇವಾರಿಗೆ ಅಸ್ಸಾಂ ಮೂಲದ 4 ಮಂದಿ ಕೆಲಸ ನಿರ್ವಹಿಸುತ್ತಿದ್ದರು. ಅವರು ಊರಿಗೆ ಹೋಗಿದ್ದರಿಂದ ಏ.1ರಿಂದ ಕಸ ವಿಲೇವಾರಿಗೆ ಸರಿಯಾದ ವ್ಯವಸ್ಥೆ ಇಲ್ಲ ಎಂದು ಹೇಳಲಾಗಿದೆ. ಪಂಚಾಯಿತಿ ಸಿಬ್ಬಂದಿ ಒಬ್ಬರೇ ಇದ್ದು, ಕಸ ವಿಲೇವಾರಿಗೆ ಗಂಭೀರ ಸಮಸ್ಯೆಯಾಗಿದೆ.

ಉಪ್ಪಿನಂಗಡಿ ಪೇಟೆಯಲ್ಲಿ ಬೆಳಗಾಗುತ್ತಿದ್ದಂತೆ ಜನ ಸಂಚಾರ, ವಾಹನ ದಟ್ಟಣೆ ಆರಂಭಗೊಂಡಿರುತ್ತದೆ. ಅಲ್ಲಲ್ಲಿ ವಾಹನ ನಿಲ್ಲಿಸಲಾಗುತ್ತದೆ. ಹೀಗಾಗಿ ಅಸ್ಸಾಂ ಮೂಲದ ಸಿಬ್ಬಂದಿ ರಾತ್ರಿ ವೇಳೆಯೇ ಕಸ ಗುಡಿಸಿ ಪೇಟೆಯನ್ನು ಶುಚಿಗೊಳಿಸುತ್ತಿದ್ದರು. ಮುಂಜಾನೆ ಪೇಟೆಗೆ ಜನ ಬರುವಷ್ಟರಲ್ಲಿ ಕಸ ವಿಲೇವಾರಿ ಮಾಡಿರುತ್ತಿದ್ದರು. ಆದರೆ, ಈಗ ಸಮಸ್ಯೆ ಉಂಟಾಗಿದ್ದು, ಸಾರ್ವಜನಿಕರು ಮತ್ತು ವರ್ತಕರು ಕಸವನ್ನು ರಸ್ತೆಗೆ ಹಾಕದೆ ಜಾಗೃತರಾಗಬೇಕಾಗಿದೆ. ಕಸ ವಿಲೇವಾರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಸಾಮಾಜಿಕ ಕಾರ್ಯಕರ್ತ ಕೈಲಾರ್ ರಾಜಗೋಪಾಲ್ ಭಟ್ ಆಗ್ರಹಿಸಿದ್ದಾರೆ.

ವಾರದೊಳಗೆ ಸಮಸ್ಯೆ ನಿವಾರಣೆ: ಅಸ್ಸಾಂ ಮೂಲದ ನಾಲ್ವರು ಕಸ ವಿಲೇವಾರಿ ಮಾಡುತ್ತಿದ್ದರು. ಅಲ್ಲಿನ ಚುನಾವಣೆಯಲ್ಲಿ ಭಾಗವಹಿಸಲು ಮತ್ತು ಅವರ ಕುಟುಂಬದವರ ಮದುವೆ ನಿಮಿತ್ತ ಅವರು ಊರಿಗೆ ತೆರಳಿದ್ದಾರೆ. ಆದರೂ ತಾತ್ಕಾಲಿಕ ನೆಲೆಯಲ್ಲಿ ನಾಲ್ವರನ್ನು ನಿಯೋಜಿಸಲಾಗಿತ್ತು. ಅನುಭವ ಇಲ್ಲದ ಕಾರಣ ಅವರು ಬಿಟ್ಟು ಹೋಗಿದ್ದು, ರಜೆಯಲ್ಲಿ ಹೋದವರು ವಾರದ ಒಳಗೆ ಬರಲಿದ್ದು, ಸಮಸ್ಯೆ ನಿವಾರಣೆಯಾಗಲಿದೆ ಎಂದು ಉಪ್ಪಿನಂಗಡಿ ಪಿಡಿಒ ವಿಲ್ಫ್ರೆಡ್ ಲಾರೆನ್ಸ್ ರಾಡ್ರಿಗಸ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-29-812776653

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.