ಉಪ್ಪಿನಂಗಡಿ: ಜಿಪಂ ಸದಸ್ಯೆ ಪರಿಶೀಲನೆ

7
ವಿದ್ಯಾರ್ಥಿ ನಿಲಯ, ಶಾಲೆಗೆ

ಉಪ್ಪಿನಂಗಡಿ: ಜಿಪಂ ಸದಸ್ಯೆ ಪರಿಶೀಲನೆ

Published:
Updated:
ಉಪ್ಪಿನಂಗಡಿ ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ ಭೇಟಿ ನೀಡಿದರು. ಸುಜಾತ ಕೃಷ್ಣ, ಸುರೇಶ್ ಅತ್ರಮಜಲು ಇದ್ದರು.

ಉಪ್ಪಿನಂಗಡಿ:  ಶಿಥಿಲಗೊಂಡಿರುವ ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್‌ ಮತ್ತು ಪ್ರವಾಸಿ ಮಂದಿರ ಹಾಗೂ ಪುಳಿತ್ತಡಿ ಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಂಗಳವಾರ ಭೇಟಿ ನೀಡಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಶಯನಾ ಜಯಾನಂದ  ಅಲ್ಲಿನ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದರು.

ವಿದ್ಯಾರ್ಥಿನಿ ನಿಲಯಕ್ಕೆ ಭೇಟಿ ನೀಡಿದ ಅವರು ಅಲ್ಲಿನ ವ್ಯವಸ್ಥೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು ಮತ್ತು ಅಲ್ಲಿನ ಚಾವಣಿಯ ಹೆಂಚು ಹಾನಿಯಾಗಿ ಮಳೆ ನೀರು ಸೋರಿಕೆ,  ಆಹಾರ, ವ್ಯವಸ್ಥೆಗಳ ಬಗ್ಗೆಯೂ ಮಾಹಿತಿ ಪಡೆದುಕೊಂಡರು.

ಪುಳಿತ್ತಡಿ-ಮಠ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಎರಡು ತರಗತಿ ಕೊಠಡಿ ಇರುವ ಕಟ್ಟಡದ ಚಾವಣಿ ವಾಲಿಕೊಂಡು ನಿಂತಿದ್ದು, ಅಪಾಯಕಾರಿ ಸ್ಥಿತಿಯಲ್ಲಿರುವ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡರು. ತಾಲ್ಲೂಕು ಪಂಚಾಯಿತಿ ಅಧೀನದಲ್ಲಿದ್ದು, ದುರಸ್ತಿ ಆಗಬೇಕಿರುವ ಪ್ರವಾಸಿ ಮಂದಿರದ ಪರಿಶೀಲನೆ ನಡೆಸಿದರು.

ಅನುದಾನ:  ‘ ಉಪ್ಪಿನಂಗಡಿ ಬಾಲಕಿಯರ ವಿದ್ಯಾರ್ಥಿನಿನಿಲಯದ ಚಾವಣಿ ದುರಸ್ತಿಗೆ ಈಗಾಗಲೇ ₹2.5 ಲಕ್ಷ ಅನುದಾನದಲ್ಲಿ, ಶೀಘ್ರ ದುರಸ್ತಿ ಮಾಡುವಂತೆ ತಿಳಿಸಲಾಗಿದೆ. ಕಟ್ಟಡ ಬಹಳ ಹಳೆಯದಾಗಿರುವುದರಿಂದಾಗಿ ಇದಕ್ಕೆ ಹೊಸ ಕಟ್ಟಡ ನಿರ್ಮಿಸುವ ಅಗತ್ಯ ಇದೆ.  ಹೊಸ ಕಟ್ಟಡಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಎಸ್ಟಿಮೇಟ್ ಸಿದ್ಧಪಡಿಸುವಂತೆ ಎಂಜಿನಿಯರ್‍ಗೆ ತಿಳಿಸಲಾಗಿದೆ ಎಂದರು. ಪುಳಿತ್ತಡಿ ಶಾಲೆಗೆ ಹೊಸ ಕಟ್ಟಡ ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸುವುದಾಗಿ ತಿಳಿಸಿದರು.

ಪ್ರವಾಸಿ ಮಂದಿರ ದುರಸ್ತಿ ಬಗ್ಗೆ ತಾಲ್ಲೂಕು ಪಂಚಾಯಿತಿಗೆ ಈಗಾಗಲೇ ಪ್ರಸ್ತಾವಣೆ ಸಲ್ಲಿಸಲಾಗಿದೆ, ಮುಂದೆ ಕ್ರಮ ಕೈಗೊಳ್ಳಲಾಗುವುದು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಜಾತ ಕೃಷ್ಣ ತಿಳಿಸಿದರು.  ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಸದಸ್ಯರಾದ ಸುರೇಶ್ ಅತ್ರಮಜಲು, ರಮೇಶ್ ಬಂಡಾರಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿ, ಬೇಡಿಕೆ ಸಲ್ಲಿಸಿದರು. ವಿದ್ಯಾರ್ಥಿ ನಿಲಯದಲ್ಲಿ ಮೇಲ್ವಿಚಾರಕಿ ಶೋಭಾ, ಪುಳಿತ್ತಡಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಜೂಲಿಯಾನ ವಾಸ್, ಶಿಕ್ಷಕ ವಿಶ್ವೇಶ್ವರ ಭಟ್ ಪೂರಕ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯರೊಂದಿಗೆ ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಮುಕುಂದ ಗೌಡ, ಗೋಳಿತೊಟ್ಟು ತಾಲ್ಲೂಕು ಪಂಚಾಯಿತಿ ಸದಸ್ಯೆ ತೇಜಸ್ವಿನಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !