ಉಪ್ಪಿನಂಗಡಿ: ಹರಾಜು ಬಿಡ್ನಲ್ಲಿ ಪಡೆದಿದ್ದ ಇಲ್ಲಿನ ಗ್ರಾಮ ಪಂಚಾಯಿತಿ ಅಧೀನದ ವಾಣಿಜ್ಯ ಸಂಕೀರ್ಣಗಳ 16 ಅಂಗಡಿಗಳಿಗೆ ಬೀಗ ಜಡಿದ ಪರಿಣಾಮ ಒಂದೇ ದಿನಕ್ಕೆ ₹15 ಲಕ್ಷ ತೆರಿಗೆ ಸಂಗ್ರಹವಾಗಿದೆ.

ಈಚೆಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗ್ರಸ್ ನೇತೃತ್ವದಲ್ಲಿ ಕಂತು ಬಾಕಿ ಇರಿಸಿಕೊಂಡ 16 ಅಂಗಡಿಗಳಿಗೆ ಬೀಗ ಜಡಿಯಲಾಯಿತು. ಇದರಿಂದ ಎಚ್ಚೆತ್ತ ಬಾಕಿದಾರರು ಬಾಕಿ ಮೊತ್ತದ ಶೇ 50ರಂತೆ ಒಟ್ಟು 15 ಲಕ್ಷ ಪಂಚಾಯಿತಿಗೆ ಸಂದಾಯ ಮಾಡಿ ಬೀಗ ತೆರವುಗೊಳಿಸಿಕೊಂಡಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ ಪಡೆದುಕೊಂಡ ಅಂಗಡಿ ಕೊಠಡಿಗಳ ಬಿಡ್ ಮೊತ್ತವನ್ನು ಕಂತುಗಳಲ್ಲಿ ಪಾವತಿಸಲು ಅವಕಾಶ ನೀಡಿದ್ದರೂ ಹಲವರು ಉಳಿಕೆ ಮೊತ್ತದ ಕಂತುಗಳನ್ನು ಪಾವತಿಸಿರಲಿಲ್ಲ. ಬಹುತೇಕ ಸಲ ಪಂಚಾಯಿತಿ ಸದಸ್ಯರ ಮನವೊಲಿಸಿ ಕಠಿಣ ಕ್ರಮದಿಂದ ಪಾರಾಗುತ್ತಿದ್ದರು.ಆದರೆ ಈಗ ಪಂಚಾಯಿತಿ ಜನಪ್ರತಿನಿಧಿಗಳ ಅಧಿಕಾರ ಅವಧಿ ಮುಗಿದಿದ್ದು, ಅಧಿಕಾರಿಗಳನ್ನು ಒಳಗೊಂಡ ಪಂಚಾಯಿತಿ ಆಡಳಿತವು ಬಾಕಿ ಮೊತ್ತ ವನ್ನು ಪಾವತಿಸುವಂತೆ ಸೂಚಿಸಿ ಬಿಗು ನಿಲುವು ತಾಳಿ ಸರ್ಕಾರಿ ರಜಾ ದಿನವಾದ ಮಂಗಳವಾರ (ಏ.14) ಮುಂಜಾನೆಯಿಂದಲೇ ಬೀಗ ಜಡಿಯುವ ಕಾರ್ಯಾಚರಣೆ ನಡೆಸಿತು.

ಉಳಿದ ಬಾಕಿ ಪಾವತಿಗೆ ಅವಕಾಶ: ಪಂಚಾಯಿತಿ ಆಡಳಿತದ ಕ್ರಮದಿಂದ ಸಾರ್ವಜನಿಕ ಮುಜುಗರಕ್ಕೆ ಒಳಗಾದ ಅಂಗಡಿ ಮಾಲೀಕರು ಪಂಚಾಯಿತಿಗೆ ಬಾಕಿ ಇರಿಸಲಾದ ಮೊತ್ತದ ಶೇ 50ರಷ್ಟನ್ನು ತಕ್ಷಣವೇ ಪಾವತಿಸಿ, ಉಳಿದ ಶೇ 50ರಷ್ಟು ಮೊತ್ತವನ್ನು ಪಾವತಿಸಲು ಹದಿನೈದು ದಿನಗಳ ಕಾಲಾವಕಾಶ ಕೇಳಿ ಭದ್ರತೆಗೆ ಚೆಕ್ ನೀಡಿದ್ದಾರೆ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಲ್ಫ್ರೆಡ್ ಲಾರೆನ್ಸ್ ರೋಡ್ರಿಗ್ರಸ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-29-1395324258

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.